ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ್ದೇ ಟೆನ್ಷನ್ ಆಗಿದ್ದು ಮತ್ತೆ ಕೊರೊನಾ ಹಾಟ್ ಸ್ಪಾಟ್ ಆಗುತ್ತಾ ಸಿಲಿಕಾನ್ ಸಿಟಿ ಎಂಬ ಭಯದಲ್ಲೇ ಇದ್ದಾರೆ. ಬೆಂಗಳೂರಿನಲ್ಲಿ ಸ್ವಲ್ಪ ಯಾಮಾರಿದ್ರೂ ಕೊರೊನಾ ಸ್ಪೋಟ ಭೀತಿ ಹೆಚ್ಚಾಗಲಿದ್ದು ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರೇ ನಂಬರ್ 1 ಆಗಲಿದ್ದು ಬೇರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲೇ ಅತೀ ಹೆಚ್ಚು ಕೇಸ್ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಕಳೆದ ಮೂರು ಅಲೆಗಳಲ್ಲಿಯೂ ಬೆಂಗಳೂರಿನಲ್ಲೇ ಅತೀ ಹೆಚ್ಚು ಕೇಸ್ ಗಳು ಪತ್ತೆಯಾಗ್ತಿದ್ದವು
ಇದೀಗ ಮತ್ತೆ ಕೋವಿಡ್ ಹೆಚ್ಚಳದಿಂದ ಬೆಂಗಳೂರು ಡೇಂಜರ್ ಆಗುತ್ತಾ ಹಾಗೆ ಬೆಂಗಳೂರಿಗರನ್ನ ಟಾರ್ಗೆಟ್ ಮಾಡ್ತಾ ಕೊರೊನಾ ನಾಲ್ಕನೇ ಅಲೆ ಎಂಬ ಸಂಶಯವು ಈಗ ಕಾಡುತ್ತಿದೆ.
ದಿನೇ ದಿನೇ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಳವಾಗ್ತಿದ್ದು ರಾಜ್ಯದಲ್ಲಿರುವ ಸಕ್ರಿಯ ಕೇಸ್ ಗಳಲ್ಲಿ ಬೆಂಗಳೂರಿನದ್ದೇ ಸಿಂಹಪಾಲು ರಾಜ್ಯದಲ್ಲಿ ಆಕ್ಟೀವ್ ಕೇಸ್ 271 ಕೇಸ್…ಬೆಂಗಳೂರಿನಲ್ಲೇ 234 ಆಕ್ಟೀವ್ ಕೇಸ್
ನಿನ್ನೇ ಒಂದೇ ದಿನ ಬೆಂಗಳೂರಿನಲ್ಲಿ 85 ಹೊಸ ಕೇಸ್ ಗಳು ಪತ್ತೆಯಾಗಿದ್ದು ಟೆಸ್ಟಿಂಗ್ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್ ಹೆಚ್ಚಳ ಬಿಬಿಎಂಪಿಯನ್ನ ನಿದ್ದೆಗೆಡಿಸಿದ ಕೋವಿಡ್ ಪಾಸಿಟಿವ್ ಕೇಸ್ ಗಳ ಸಂಖ್ಯೆ..
ದಿನೇ ದಿನೇ ಬೆಂಗಳೂರು ನಗರದಲ್ಲಿ ಜಿಗಿತಿರೋ ಕೋವಿಡ್ ಕೇಸ್ ಗಳ ಸಂಖ್ಯೆ ಹೆಚ್ಚಾಗಿದ್ದು ಬೆಂಗಳೂರು ಹೊರತುಪಡಿಸಿದ್ರೆ ಮೈಸೂರು, ಶಿವಮೊಗ್ಗ ದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಹೆಚ್ಚಳವಾಗಿದೆ.