ಮಣಿಪುರ:- ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಅಪರಿಚಿರು ಹತ್ಯೆಗೈದ ಘಟನೆ ಜರುಗಿದೆ.
ಜನರ ಪ್ರಾಣ ಅಂದ್ರೆ ಬಿಎಂಟಿಸಿಗೆ ಲೆಕ್ಕಕ್ಕಿಲ್ವಾ? ಬೈಕ್ ಸವಾರನನ್ನು ಬೀಳಿಸಿ ಚಾಲಕ ಜೂಟ್!
ರಾಜ್ಯದ ಕಕ್ಚಿಂಗ್ ಜಿಲ್ಲೆಯಲ್ಲಿ ಬಿಹಾರದ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.ಶನಿವಾರ ಸಂಜೆ ಕೆಲವು ಅಪರಿಚಿತ ಬಂದೂಕುಧಾರಿಗಳು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಕೊಂದರು
ಮೃತ ಕಾರ್ಮಿಕರು ಬಿಹಾರದ ನಿವಾಸಿಗಳಾಗಿದ್ದು, 18 ವರ್ಷದ ಸುನಾಲಾಲ್ ಕುಮಾರ್ ಮತ್ತು 17 ವರ್ಷದ ದಶರತ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಟ್ಟಡ ಕಾರ್ಮಿಕರಾಗಿದ್ದು, ಮೈಥಿ ಪ್ರಾಬಲ್ಯದ ಕಕ್ಚಿಂಗ್ ಜಿಲ್ಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಘಟನೆಯ ಹಿಂದಿನ ವ್ಯಕ್ತಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ಘಟನೆಯಿಂದಾಗಿ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಈ ಘಟನೆಯಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ.