ಶ್ರೀಲೀಲಾ (Sreeleela) ಮತ್ತೆ ಮತ್ತೆ ಸುದ್ದಿಗೆ ಬರುತ್ತಿದ್ದಾರೆ. ವೈಷ್ಣವ್ ತೇಜ್ (Vaishnav Tej) ಜೊತೆ ಇವರು ಅಭಿನುಯಿಸಿದ ಆದಿಕೇಶವ ಸಿನಿಮಾ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಶ್ರೀಲೀಲಾ ಮಾತ್ರ ನಾ ಬರಲ್ಲ ಎಂದು ಹಠ ಹಿಡಿದಿದ್ದಾರೆ. ಇಷ್ಟಾದರೂ ಸಿನಿಮಾ ಗೆಲ್ಲುತ್ತೆ ಎನ್ನುತ್ತಿದ್ದಾರೆ ವೈಷ್ಣವ್. ಇದೇನಿದು ಹೀರೋ- ಹೀರೋಯಿನ್ ಜಗಳ ? ಇಲ್ಲಿದೆ ಅಪ್ಡೇಟ್.
ಶ್ರೀಲೀಲಾ ಯಾರ ಕೈಗೂ ಸಿಗುತ್ತಿಲ್ಲ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಟಾಪ್ ಹೀರೋಗಳು ಈಕೆ ಕಾಲ್ಶೀಟ್ಗೆ ಕಾಯುವಂತಾಗಿದೆ. ಪ್ರಿನ್ಸ್ ಮಹೇಶ್ ಬಾಬುವಿನಿಂದ ಹಿಡಿದು ಪವನ್ ಕಲ್ಯಾನ್ ಕೂಡ ಶ್ರೀಲೀಲಾ ಎಲ್ಲಿ ನಿನ್ನಯ ಪಾದ ಕಮಲ ಎನ್ನುತ್ತಿದ್ದಾರೆ. ಈ ಹೊತ್ತಲ್ಲೇ ಶ್ರೀ ನಟಿಸಿದ ಇನ್ನೊಂದು ಸಿನಿಮಾ
ಧಮಾಕಾ, ಭಗವಂತ ಕೇಸರಿ ಹಿಟ್ ಆಗಿವೆ. ಇದರ ಬೆನ್ನಿಗೇ ಆದಿಕೇಶವ ಬರುತ್ತಿದೆ. ಆದರೆ ಶ್ರೀಲೀಲಾಗೆ ಮಾತ್ರ ಪ್ರಚಾರಕ್ಕೆ ಬರಲು ಆಗುತ್ತಿಲ್ಲ. ಹೀಗಿದ್ದರೂ ಸಿನಿಮಾ ಹಿಟ್ ಆಗುತ್ತದೆ. ಶ್ರೀಲೀಲಾ ಇದ್ದರೆ ಸಾಕು, ಸಿನಿಮಾ ಗೆಲ್ಲುತ್ತದೆ ಎನ್ನುತ್ತಿದ್ದಾರೆ ಹೀರೋ ವೈಷ್ಣವ್ ತೇಜ್. ಮೆಗಾ ಫ್ಯಾಮಿಲಿಯಿಂದ ಬಂದ ಹುಡುಗನೇ ಹೀಗೆ ಹೇಳಬೇಕಾದರೆ ಶ್ರೀಲೀಲಾ ಕಮಾಲ್ ಹೇಗಿರಬೇಕು ನೀವೇ ಯೋಚಿಸಿ. ಏನಾದರೂ ಆಗಲಿ ಕನ್ನಡದ ಹುಡುಗಿಗೆ ಇಷ್ಟೊಂದು ಕ್ರೇಜ್ ಇದೆಯಲ್ಲ. ಅದನ್ನು ನಾವು ಮೆಚ್ಚಬೇಕು.
ಒಟ್ನಲ್ಲಿ ಶ್ರೀಲೀಲಾ ಸದ್ಯ ತೆಲುಗು ಹೀರೋಗಳ ಪಾಲಿಗೆ ಲಕ್ಕಿ ನಟಿಯಾಗಿ ಬೆಳೆಯುತ್ತಿದ್ದಾರೆ. ನಮ್ಮ ಸಿನಿಮಾದಲ್ಲಿ ಶ್ರೀಲೀಲಾ ಇದ್ದರೆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಖುಷಿಯಲ್ಲಿದ್ದಾರೆ.