ಹುಬ್ಬಳ್ಳಿ: ಲಕ್ಷ್ಮಣಸವದಿ ಅವರು ಬಿಜೆಪಿಗೆ ಅವರು ಹೋಗ್ತಾರೋ ಇಲ್ವೋ ನೀವು ಅವರನ್ನೇ ಕೇಳ್ಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಶೆಟ್ಟರ್ ಅವರನ್ನು ಉಳಿಸಿಕೊಳ್ಳೋ ಕೆಲಸ ಮಾಡಿಲ್ಲ ಎಂಬ ಸವದಿ ಹೇಳಿಕೆಗೆ, ಅವರು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವಂತದ್ದು ಏನಿದೆ ಹೇಳಿ? ಅವರಿಗೆ ನಮ್ಮ ಪಕ್ಷ ಕರ್ಕೊಂಡು ಟಿಕೆಟ್ ಕೊಟ್ಟಿದೆ.
ಅವರಿಗೆ ಎಂಎಲ್ಸಿ ಮಾಡಿದ್ದೀವಿ ಉಳಿಸಿಕೊಳ್ಳಬೇಕು ಅಂದ್ರೆ ಯಾವ ರೀತಿ ಉಳಿಸಿಕೊಳ್ಳಬೇಕು? ನನಗೆ ಗೊತ್ತಿಲ್ಲ. ಬಿಜೆಪಿ ಒಪರೇಷನ್ ಕಮಲದ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಅವರುನಾವು 136 ಇದೀವಿ, ಅವರಿಬ್ಬರೂ ಸೇರಿದ್ರೆ 85 ಇದ್ದಾರೆ. ಲೆಕ್ಕ ಪ್ರಕಾರ ಹೋದ್ರೆ 53 ಜನ ಹೋಗ್ಬೇಕು 53 ಜನ ಹೋದ್ರೆ ಮಾತ್ರ ಏನಾದ್ರೂ ಆಗಬಹುದು ಎಂದರು.
ಪದೇ ಪದೇ ಇದೆ ಮಾತಾಡಿ ಸಾಕಾಗಿ ಹೋಗಿದ್ದು ಶ್ರೀಲಂಕಾ, ಬಾಂಗ್ಲಾ, ಅಫ್ಘಾನಿಸ್ತಾನ್ ಸರ್ಕಾರ ಬಿಳಿಸೋಕೆ ಹೇಳಿ ಅವರಿಗೆ ಯಾಕಂದ್ರೆ ವಿಶ್ವ ಗುರು ಅಲ್ಲ ಅದನ್ನು ಮಾಡಲಿಕ್ಕೆ ಹೇಳಿ. ಈ ದೇಶದ ಮೇಲೆ 175 ಲಕ್ಷ ಕೋಟಿ ರೂ ಸಾಲ ಇದೆ ಭಾರತೀಯ ಜನತಾ ಪಕ್ಷ ಸರ್ಕಾರಕ್ಕೂ ಮುನ್ನ 58 ಲಕ್ಷ ರೂ ಕೋಟಿ ಸಾಲ ಇತ್ತು. ಇದು ನೇರವಾಗಿ ಕೇಂದ್ರ ಸರ್ಕಾರದ ಸಾಲ 14 ಲಕ್ಷದ 70 ಕೋಟಿ ರೂ ಉದ್ಯಮಿಗಳ ಸಾಲ ಮನ್ನಾ ಆಗಿದೆ ಎಂದರು.