ನಟಿ ದೀಪಿಕಾ ದಾಸ್ ಹಾಗೂ ದೀಪಕ್ ಅವರ ವಿವಾಹ ಕಳೆದವಾರ ನೆರವೇರಿತ್ತು.
ಇತ್ತೀಚಿಗೆ ಬೆಂಗಳೂರು ನಗರದ ಖಾಸಗಿ ರೆಸಾರ್ಟ್ ನಲ್ಲಿ ದೀಪಿಕಾ ದಾಸ್ ಹಾಗೂ ದೀಪಕ್ ದಂಪತಿಯ ಆರತಕ್ಷತೆ ಹಾಗೂ ಬೀಗರೂಟ ಅದ್ದೂರಿಯಾಗಿ ನಡೆಯಿತು.
ಅನುಪಮ ಗೌಡ, ವಾಸುಕಿ ವೈಭವ್, ದಿವ್ಯ ಉರುಡಗ, ಕಿಶನ್, ನೀತು, ಪ್ರಿಯಾಂಕ ಮುಂತಾದ ಮಿತ್ರರು, ಆತ್ಮೀಯರು ಹಾಗೂ ಬಂಧು ಬಳಗದವರು ಆರತಕ್ಷತೆಗೆ ಆಗಮಿಸಿ ನೂತನ ಜೋಡಿಗೆ ಶುಭ ಕೋರಿದರು.