ಬೆಂಗಳೂರು:- PM ನರೇಂದ್ರ ಮೋದಿ ಹಾಡಿ ಹೊಗಳಿದ್ದ ಗಾಯಕಿ ಜೊತೆ ತೇಜಸ್ವಿ ಸೂರ್ಯ ಮದುವೆ ಆಗಲಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಶೀಘ್ರವೇ ಹಸೆಮಣೆ ಏರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಗಾಯಕಿ ಜೊತೆ ಸಂಸದ ತೇಜಸ್ವಿ ಸೂರ್ಯಗೆ ಮದುವೆ ಮಾತುಕತೆ ನಡೆಯುತ್ತಿದೆ.
ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪೂಜಿಸಲೆಂದೇ ಹೂಗಳ ತಂದೆ ಹಾಡುವ ಮೂಲಕ ಮೋದಿಯವರ ಮೆಚ್ಚುಗೆಗೆ ಪಾತ್ರರಾಗಿದ್ದ ಗಾಯಕಿ ಸಿವಶ್ರೀ ಸ್ಕಂದ ಪ್ರಸಾದ್ ಅವರನ್ನು ತೇಜಸ್ವಿ ಸೂರ್ಯ ಮದುವೆ ಆಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಿವಶ್ರೀ ಅವರು ಚೆನ್ನೈ ಮೂಲದ ಹೆಸರಾಂತ ಗಾಯಕಿ, ಭರತನಾಟ್ಯ ಪ್ರವೀಣೆ ಹಾಗೂ ಬಿಟೆಕ್ ಪದವೀಧರೆಯಾಗಿದ್ದಾರೆ. ಸದ್ಯ ಎರಡೂ ಕುಟುಂಬಗಳ ಮಧ್ಯೆ ವಿವಾಹಕ್ಕೆ ಮಾತುಕತೆ ನಡೆಯುತ್ತಿದೆ. ತೇಜಸ್ವಿ ಹಾಗೂ ಸಿವಶ್ರೀ ಸಹ ಈಗಾಗಲೇ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಇನ್ನು ನಾಲ್ಕೈದು ತಿಂಗಳಲ್ಲಿ ಸಿವಶ್ರೀ ಮತ್ತು ತೇಜಸ್ವಿ ಜೊತೆಯಾಗಿ ಸಪ್ತಪದಿ ತುಳಿಯಲಿದ್ದಾರೆ