ಹುಬ್ಬಳ್ಳಿ : ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆ ನೀಡುತ್ತಿರುವ ಅಪೊಲೋ ಆಸ್ಪತ್ರೆಯು, ಮೂತ್ರಶಾಸದ ಆರೈಕೆಯಲ್ಲಿ (ಯುರೋಲೊಜಿಕೇರ್) ದೇಶದಲ್ಲಿ ಮೊದಲ ಬಾರಿಗೆ ಮೋಸೆಸ್ ೨.೦ ತಂತ್ರಜ್ಞಾನವನ್ನು ಪ್ರಾರಂಭಿಸಿದೆ. ಪ್ರಾಯೋಗಿಕವಾಗಿ ಶೇಷಾದ್ರಿಪುರಂನ ಅಪೊಲೋ ಆಸ್ಪತ್ರೆಯಲ್ಲಿ ಈ ಸೇವೆ ಪರಿಚಯಿಸಲಾಗಿದೆ.
ಮಧುಮೇಹ, ಅಧಿಕರಕ್ತದೊತ್ತಡ, ಹೃದಯ ತೊಂದರೆ ಹಾಗೂ ಮೂತ್ರಪಿಂಡದಲ್ಲಿ ಕಲ್ಲು ಸೇರಿ ಇತರೆ ಸಮಸ್ಯೆಗಳಿಗೆ ಸುಧಾರಿತ ಲೇಸರ್ ತಂತ್ರ ಜ್ಞಾನ ಮೂಲಕ ಚಿಕಿತ್ಸೆ ನೀಡಲು ಇದು ಸಹಾಯವಾಗುತ್ತದೆ. ಸಂಪೂರ್ಣವಾಗಿ ರಕ್ತರ ಹಿತ ಮತ್ತು ನೋವು ರಹಿತ ಶಸ್ತ್ರ ಚಿಕಿತ್ಸೆಯೂ ಸಿಗಲಿದೆ. ಕೇವಲ ಒಂದು ಗಂಟೆಯಲ್ಲಿ ಮೂತ್ರಪಿಂಡದಲ್ಲಿರುವ ಕಲ್ಲು ಮತ್ತು ಪ್ರಾಸ್ಟೇಟ್ ಅನ್ನು ಅತ್ಯಂತ ನಿಖರತೆಯಿಂದ ತೆಗೆದು ಹಾಕಲು ತಂತ್ರಜ್ಞಾನ ನೆರವು ಆಗಲಿದೆ. ಹೆಚ್ಚುದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವುದನ್ನು ತಪ್ಪಿಸಲು ಹಾಗೂ ಶಸ್ತ್ರ ಚಿಕಿತ್ಸೆ ಬಳಿಕ ವೇಗವಾಗಿ ಚೇತರಿಸಿಕೊಳ್ಳಲು ಅನುಕೂಲವಾಗಲಿದೆ
ಈ ಮೂಲಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಸಾಲಿನಲ್ಲಿ ವಿಶ್ವದಲ್ಲೇ ೩ನೇರಾಷ್ಟ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ. ಮೋಸಸ್ ತಂತ್ರಜ್ಞಾನವನ್ನು ಕಲ್ಲುಗಳಿಗೆ ಚಿಕಿತ್ಸೆ ನೀಡಲು ಬಳಸಿದ್ದಾಗ ಇದನ್ನು ಮೋಸೆಸ್ ಲೇಸರ್ ಟೆಕ್ನಾಲಜಿ ಫ್ರಾಗ್ಮೆಂಟೇಶನ್ (ಎಂಎಲ್ಟಿಎ) ಹಾಗೂ ಪ್ರಾಸ್ಟೇಟ್ಚಿಕಿತ್ಸೆಯಲ್ಲಿ ಬಳಸಿದಾಗ ಇದನ್ನು ಮೋಸೆಸ್ಲೇಸರ್ಎನ್ಯುಕ್ಲಿಯೇಶನ್ (ಎಂಒಎಲ್ಇಪಿ) ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ ಎಂದು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಮೂತ್ರಶಾಸ್ತ್ರ, ಕಸಿ ಮತ್ತು ರೋಬೋಟಿ ಶಸ್ತ್ರ ಚಿಕಿತ್ಸಕ ಡಾ.ಟಿ.ಮನೋಹರ ಹೇಳುತ್ತಾರೆ.
ಮೋಸೆಸ್ ೨.೦ ತಂತ್ರಜ್ಞಾನದಡಿ ಚಿಕಿತ್ಸೆ ನಡೆಸಲು ವೈದ್ಯರಿಗೆ ಹೆಚ್ಚಿನ ತರಬೇತಿ ಅಗತ್ಯವಿದೆ. ವಿಶೇಷ ತರಬೇತಿ ಪಡೆದಿರುವ ಹಾಗೂ ಅನುಭವ ಹೊಂದಿರುವ ವೈದ್ಯರು ಮಾತ್ರ ಚಿಕಿತ್ಸೆ ನೀಡಲು ಸಮರ್ಥ ಇರುತ್ತಾರೆ. ಹಾಗಾಗಿ, ಉತ್ತಮ ತಾಂತ್ರಿಕ ಕೌಶಲ ಮತ್ತು ಪರಿಣತಿ ಹೊಂದಲು ಶಸ್ತ್ರಚಿಕಿತ್ಸಕರು ವ್ಯಾಪಕ ತರಬೇತಿ ಪಡೆಯಬೇಕು. ಲೇಸರ್ನಲ್ಲಿ ೧೬ ವರ್ಷಗಳ ಅನುಭವ ಹೊಂದಿರುವ ಡಾ.ಟಿ. ಮನೋಹರ್, ಮೋಸೆಸ್ ೨.೦ ಕುರಿತು ತಂತ್ರಜ್ಞಾನದ ಶಸ್ತ್ರ ಚಿಕಿತ್ಸೆ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ತರಬೇತಿ ಪಡೆದ ಶಸ್ತ್ರಚಿಕಿತ್ಸಕರು ಯಾವುದೇ ಅಪಾಯವಿಲ್ಲದೆ ರೋಗಿಗಳಿಗೆ ಸಮರ್ಪಕವಾಗಿ ಶಸಚಿಕಿತ್ಸೆ ನಡೆಸುವುದು ಮುಖ್ಯವಾಗುತ್ತದೆ. ಜತೆಗೆ, ಇದರ ಕಾರ್ಯವಿಧಾನದ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಡಾ.ಟಿ.ಮನೋಹರ ಶಸ್ತ್ರ ಚಿಕಿತ್ಸಕರಿಗೆ ಸಲಹೆ ನೀಡಿದರು.