ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಅನ್ನು ಇಂದು ಕೋಟ್ಯಾಂತರ ಜನರು ಉಪಯೋಗಿಸುತ್ತಿದ್ದಾರೆ. ಇದರ ಬಳಕೆಗೆ ಇಂಟರ್ನೆಟ್ ಬೇಕೇ ಬೇಕು. ನೀವು ಯಾವುದೇ ವಿಡಿಯೋ, ಫೋಟೋ ಅಥವಾ ಏನೇ ಫೈಲ್ ಅನ್ನು ವಾಟ್ಸ್ಆ್ಯಪ್ ಮೂಲಕ ಮತ್ತೊಂದು ಫೋನ್ಗೆ ಕಳುಹಿಸಲು ಬಯಸಿದರೆ, ಖಂಡಿತವಾಗಿಯೂ ಇಂಟರ್ನೆಟ್ ಅಗತ್ಯವಿದೆ.
ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ, ಅರ್ಜಿಯೂ ಹಾಕಿಲ್ಲ: ಆರ್.ಅಶೋಕ್
ಇಂಟರ್ನೆಟ್ ಇಲ್ಲದೆ ನೀವು ಯಾರಿಗೆ ಬೇಕಾದರೂ ಸಂದೇಶಗಳನ್ನು ಕಳಿಸಬಹುದು. ಇದಕ್ಕೆ ಯಾವುದೇ ವೈಫೈ ಹಾಗೂ ಇಂಟರ್ನೆಟ್ ಅವಶ್ಯಕತೆ ಇಲ್ಲ ಹೇಗೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ..
ನಿಮ್ಮ ಮೊಬೈಲ್ ನಲ್ಲಿ ವಾಟ್ಸಪ್ ಓಪನ್ ಮಾಡಿ ಅಲ್ಲಿ ಸೆಟ್ಟಿಂಗ್ಸ್ ಆಪ್ಷನ್ ಗೆ ಹೋಗಿ ಅಲ್ಲಿರುವ ಸ್ಟೋರೇಜ್ ಮತ್ತು ಡೇಟಾ ಆಪ್ಷನ್ಗೆ ಹೋಗಿ ಬಳಿಕ ಅಲ್ಲಿರುವ ಪ್ರಾಕ್ಸಿ ಆಯ್ಕೆಯನ್ನು ಆನ್ ಮಾಡಬೇಕು. ಪ್ರಾಕ್ಸಿ ಆನ್ ಮಾಡಿದಾಗ ನಿಮ್ಮ ಗೌಪ್ಯತೆ ಹಾಗೂ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನೀವು ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ನಲ್ಲಿ ವಾಟ್ಸಪ್ ವೆಬ್ ಸರ್ಚ್ ಮಾಡಿ ನಿಮಗೆ ಸ್ಕ್ಯಾನರ್ ದೊರೆಯುತ್ತದೆ. ಆಗ ನೀವು ಮೊಬೈಲ್ ನಿಂದ ಸ್ಕ್ಯಾನ್ ಮಾಡಿದಾಗ ಮೊಬೈಲ್ನಲ್ಲಿ ಇಂಟರ್ನೆಟ್ ಇಲ್ಲದೆ ಇದ್ದರೂ ವಾಟ್ಸಾಪ್ ಅನ್ನು ನೀವು ಲ್ಯಾಪ್ಟಾಪ್, ನಲ್ಲಿ ಬಳಸಬಹುದು.