ಟೀಮ್ ಇಂಡಿಯಾದ ದೊಡ್ಡ ಸಮಸ್ಯೆಯೇ ಕೋಚ್ ಗೌತಮ್ ಗಂಭೀರ್ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೈನ್ ಟೀಮ್ ಇಂಡಿಯಾ ಕೋಚ್ ಅವರು ಗೇಲಿ ಮಾಡಿದ್ದಾರೆ.
ಪಾಕ್ ತಂಡದ ಮತ್ತೊಂದು ವಿವಾದ: ಮುಖ್ಯ ಕೋಚ್ ಹುದ್ದೆಯಿಂದ ವಜಾ ಆಗ್ತಾರಾ ಜೇಸನ್ ಗಿಲ್ಲೆಸ್ಪಿ!?
ಆಸ್ಟ್ರೇಲಿಯಾದಲ್ಲಿ ಈ ಬಾರಿ ಭಾರತ ತಂಡ ಸರಣಿ ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಈ ಸಲ ಟೀಮ್ ಇಂಡಿಯಾದ ಕೋಚ್ ಬದಲಾಗಿದ್ದಾರೆ. ಇಲ್ಲಿ ಎಲ್ಲರೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನನ್ನ ಪ್ರಕಾರ ಅದು ಸಮಸ್ಯೆಯೇ ಅಲ್ಲ ಎಂದು ಟಿಮ್ ಪೈನ್ ಹೇಳಿದ್ದಾರೆ.
ಟೀಮ್ ಇಂಡಿಯಾದ ಅಸಲಿ ಸಮಸ್ಯೆ ಎಂದರೆ ಅವರ ಕೋಚ್ ಗೌತಮ್ ಗಂಭೀರ್. ಆತನಿಗೆ ಒತ್ತಡದ ಸಂದರ್ಭಗಳಲ್ಲಿ ಸಂಯಮ ಕಾಪಾಡಿಕೊಳ್ಳಲು ಬರಲ್ಲ. ಅದನ್ನು ಮೊದಲು ಕಲಿಯಬೇಕಾದ ಅವಶ್ಯಕತೆಯಿದೆ ಎಂದು ಟಿಮ್ ಪೈನ್ ಹೇಳಿದ್ದಾರೆ.
ಟಿಮ್ ಪೈನ್ ಇಂತಹದೊಂದು ಹೇಳಿಕೆ ನೀಡಲು ಮುಖ್ಯ ಕಾರಣ, ಇತ್ತೀಚೆಗೆ ರಿಕಿ ಪಾಂಟಿಂಗ್ ಅವರಿಗೆ ಗಂಭೀರ್ ನೀಡಿದ ಪ್ರತ್ಯುತ್ತರ. ಸಂದರ್ಶನವೊಂದರಲ್ಲಿ ಪಾಂಟಿಂಗ್ ಅವರಲ್ಲಿ ಟೀಮ್ ಇಂಡಿಯಾ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೇ ವೇಳೆ ಪಾಂಟಿಂಗ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ ಮಾತನಾಡಿದ್ದರು.
ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರ ಮುಂದಿಡಲಾಗಿತ್ತು. ಇದೇ ವೇಳೆ ಕುಪಿತಗೊಂಡಿದ್ದ ಟೀಮ್ ಇಂಡಿಯಾ ಕೋಚ್, ಭಾರತೀಯ ಕ್ರಿಕೆಟ್ನಲ್ಲಿ ಪಾಂಟಿಂಗ್ ಕೆಲಸವೇನು ಎಂದು ಪ್ರಶ್ನಿಸಿದ್ದರು. ಅಲ್ಲದೆ ನಿಮ್ಮ ತಂಡವನ್ನು ನೋಡಿಕೊಳ್ಳಿ, ಭಾರತ ತಂಡದ ಉಸಾಬರಿ ನಿಮಗೆ ಬೇಡ ಎಂದು ನೇರವಾಗಿ ಉತ್ತರಿಸಿದ್ದರು.
ಇದನ್ನು ಪ್ರಸ್ತಾಪಿಸಿ ಇದೀಗ ಟಿಮ್ ಪೈನ್, ಭಾರತ ತಂಡದ ಕೋಚ್ಗೆ ಹೇಗೆ ಸಂಯಮ ಪಾಲಿಸಬೇಕೆಂದು ಗೊತ್ತಿಲ್ಲ. ಅದರಲ್ಲೂ ಒತ್ತಡವನ್ನು ನಿಭಾಯಿಸುವುದು ಹೇಗೆಂದು ಕಲಿಯುವ ಅವಶ್ಯಕತೆಯಿದೆ. ಅಲ್ಲದೆ ಅವರ ವರ್ತನೆಯ ಶೈಲಿಯು ಭಾರತ ತಂಡಕ್ಕೆ ಸರಿ ಹೊಂದುವುದಿಲ್ಲ ಎಂದು ತಿಳಿಸಿದ್ದಾರೆ.