ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ನಂ.1 ಬೌಲರ್ ಆಗಿದ್ದಾರೆ. ವಿಭಿನ್ನ ಬೌಲಿಂಗ್ ಶೈಲಿ, ಮಿಂಚಿನ ವೇಗ, ಅದ್ಭುತ ನಿಖರತೆ, ಮಾರಕ ಬೌನ್ಸರ್ ಮತ್ತು ಅಪಾಯಕಾರಿ ಯಾರ್ಕರ್ ಎಲ್ಲ ಅಸ್ತ್ರಗಳನ್ನು ಬತ್ತಳಿಕೆಯಲ್ಲಿ ಹೊಂದಿರುವ ಬೂಮ್ ಬೂಮ್ ಖ್ಯಾತಿಯ ಬುಮ್ರಾ, ಎದುರಾಳಿ ಬ್ಯಾಟರ್ಗಳ ಎದೆಯಲ್ಲಿ ನುಡುಕ ಹುಟ್ಟಿಸಿದ್ದಾರೆ. ಆದರೆ, ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್, ವಿಶ್ವದ ಬೆಸ್ಟ್ ಬೌಲರ್ಸ್ ಆಯ್ಕೆ ವಿಚಾರದಲ್ಲಿ ಜಸ್ಪ್ರೀತ್ ಬುಮ್ರಾ ಅವರಗೆ 3ನೇ ಸ್ಥಾನ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಆರ್ಆರ್ ನೀಡಿದ್ದ ಬ್ಲಾಂಕ್ ಚೆಕ್ ನಿರಾಕರಿಸಿದ ರಾಹುಲ್ ದ್ರಾವಿಡ್: ಕಾರಣವಿಷ್ಟೇ!
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಇಂಡಿಯಾ ‘ಎ’ ತಂಡದ ಪರ ಆಡುತ್ತಿರುವ ಕೆಎಲ್ ರಾಹುಲ್, ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ ತಮ್ಮ ವೃತ್ತಿಬದುಕಿನಲ್ಲಿ ಕಂಡ ಐವರು ಅಗ್ರ ಬೌಲರ್ಗಳು ಯಾರೆಂದು ಹೆಸರಿಸಿದ್ದಾರೆ.
ಟಾಪ್ 5 ಬೆಸ್ಟ್ ಬೌಲರ್ಗಳಿಗೆ ಶ್ರೇಯಾಂಕ ಕೊಟ್ಟು ಮಾತನಾಡಿದ ಕೆಎಲ್ ರಾಹುಲ್, ಇತ್ತೀಚೆಗಷ್ಟೇ ನಿವೃತ್ತಿ ತೆಗೆದುಕೊಂಡ ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರಿಗೆ 2ನೇ ಸ್ಥಾನ ನೀಡಿದ್ದಾರೆ. ಬಳಿಕ ದಕ್ಷಿಣ ಆಫ್ರಿಕಾದ ಲೆಜೆಂಡರಿ ವೇಗಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ವೇಗದ ಬೌಲರ್ ಡೇಲ್ ಸ್ಟೇನ್ ಅವರಿಗೆ ನಂ.1 ಸ್ಥಾನ ಕೊಟ್ಟಿದ್ದಾರೆ. 3ನೇ ಸ್ಥಾನವನ್ನು ಟೀಮ್ ಇಂಡಿಯಾ ತಾರೆ ಬುಮ್ರಾಗೆ ಕೊಟ್ಟು, 4ನೇ ಸ್ಥಾನನವನ್ನು ಅಫಘಾನಿಸ್ತಾನ ತಂಡದ ಲೆಗ್ ಸ್ಪಿನ್ನರ್ ರಶೀದ್ ಖಾನ್ಗೆ ಒಪ್ಪಿಸಿದ್ದಾರೆ. ಪಾಕಿಸ್ತಾನ ತಂಡದ ಯುವ ವೇಗದ ಬೌಲರ್ ನಸೀಮ್ ಶಾ ಅವರನ್ನು ತಾವು ಕಂಡ 5ನೇ ಅತ್ಯುತ್ತಮ ಬೌಲರ್ ಎಂದಿದ್ದಾರೆ.