ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರ ಕೆಟ್ಟ ದಿನವಾಗಿದೆ. ಭಾರತದ ಪುರುಷರ ತಂಡ ಅಡಿಲೇಡ್ನಲ್ಲಿ 10 ವಿಕೆಟ್ಗಳಿಂದ 2ನೇ ಟೆಸ್ಟ್ ಸೋತಿದೆ.
ಏಷ್ಯನ್ ಕಿರೀಟ ಬಾಂಗ್ಲಾ ಪಾಲಾಗಿದ್ದು, ಟೀಮ್ ಇಂಡಿಯಾ ಭಾರೀ ನಿರಾಸೆ ಆಗಿದೆ.
ಬಾಂಗ್ಲಾದೇಶ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಅತ್ಯಂತ ಕಡಿಮೆ ಸ್ಕೋರಿಂಗ್ ಆಗಿದ್ದು, ಬಾಂಗ್ಲಾದೇಶ ತಂಡ ಅದ್ಭುತ ಪ್ರದರ್ಶನ ನೀಡಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬಾಂಗ್ಲಾದೇಶ ತಂಡ ಸತತ ಎರಡನೇ ಬಾರಿಗೆ ಅಂಡರ್-19 ಏಷ್ಯಾಕಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಪಂದ್ಯಾವಳಿಯನ್ನು 1989 ರಿಂದ ಆಡಲಾಗುತ್ತಿದ್ದು ಬಾಂಗ್ಲಾದೇಶ ತಂಡ ಅಂಡರ್-19 ಏಷ್ಯಾಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಎರಡನೇ ತಂಡವಾಗಿದೆ. ಉಳಿದಂತೆ ಟೀಂ ಇಂಡಿಯಾ 8 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ ಈ ಎರಡು ತಂಡಗಳನ್ನು ಹೊರತುಪಡಿಸಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಲಾ 1 ಬಾರಿ ಈ ಪಂದ್ಯಾವಳಿಯನ್ನು ಗೆದ್ದಿವೆ. ಒಂದೆಡೆ ಬಾಂಗ್ಲಾದೇಶ ಸತತ 2ನೇ ಬಾರಿಗೆ ಏಷ್ಯನ್ ಕಿರೀಟ ತೊಟ್ಟಿದ್ದರೆ, ಇತ್ತ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಫೈನಲ್ನಲ್ಲಿ ಸೋಲು ಕಂಡಿದೆ. ಈ ಹಿಂದೆ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ನಲ್ಲಿ ಆಡಿದ ಪ್ರತಿ ಫೈನಲ್ ಪಂದ್ಯದಲ್ಲೂ ಪ್ರಶಸ್ತಿ ಜಯಿಸಿತ್ತು.
ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾಯಕ ನಿರ್ಧಾರವನ್ನು ಸರಿ ಎಂದು ಸಾಭೀತುಪಡಿಸಿದ ಭಾರತದ ಬೌಲರ್ಗಳು ಬಾಂಗ್ಲಾದೇಶ ತಂಡವನ್ನು 198 ರನ್ಗಳಿಗೆ ನಿರ್ಬಂಧಿಸುವಲ್ಲಿ ಯಶಸ್ವಿಯಾದರು. ತಂಡದ ಪರ ಯುಧಾಜಿತ್ ಗುಹಾ, ಚೇತನ್ ಶರ್ಮಾ ಮತ್ತು ಹಾರ್ದಿಕ್ ರಾಜ್ ತಲಾ 2 ವಿಕೆಟ್ ಪಡೆದರೆ, ಕಿರಣ್ ಚೋರ್ಮಲೆ, ಕೆಪಿ ಕಾರ್ತಿಕೇಯ ಮತ್ತು ಆಯುಷ್ ಮ್ಹಾತ್ರೆ ತಲಾ 1 ವಿಕೆಟ್ ಪಡೆದರು. ಮತ್ತೊಂದೆಡೆ, ಬಾಂಗ್ಲಾದೇಶ ಪರ ರಿಜಾನ್ ಹಸನ್ ಗರಿಷ್ಠ 47 ರನ್ ಗಳಿಸಿದರೆ, ಮೊಹಮ್ಮದ್ ಶಿಹಾಬ್ ಜೇಮ್ಸ್ ಕೂಡ 40 ರನ್ ಕೊಡುಗೆ ನೀಡಿದರು. ಫರೀದ್ ಹಸನ್ ಕೂಡ 39 ರನ್ ಗಳ ಇನಿಂಗ್ಸ್ ಆಡಿದರು