ಬುಡಾಪೆಸ್ಟ್: ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ಚೆಸ್ ಒಲಿಂಪಿಯಾಡ್ನಲ್ಲಿ ಭಾರತವು ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಬೀಗಿದೆ.
ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಭಾರತದ ಪುರುಷರ ತಂಡದ ಡಿ.ಗುಕೇಶ್, ಆರ್.ಪ್ರಜ್ಞಾನಂದ, ಅರ್ಜುನ್ ಎರಿಗೈಸಿ, ವಿದಿತ್ ಗುಜರಾತಿ ಮತ್ತು ಪೆಂಟಾಲ ಹರಿಕೃಷ್ಣ ಅವರು ಸ್ಲೊವೇನಿಯಾ ವಿರುದ್ಧ ಮಿಂಚುವ ಮೂಲಕ ಚಿನ್ನದ ಪದಕವನ್ನು ಪಡೆದರು.
IPL 2025: ಎಂ.ಎಸ್ ಧೋನಿ ಉಳಿಸಿಕೊಳ್ಳಲು ಸ್ಟಾರ್ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ
ಡಿ.ಗುಕೇಶ್ ಮತ್ತು ಅರ್ಜುನ್ ಎರಿಗೈಸಿ ಅವರ ಗೆಲುವು ಭಾರತಕ್ಕೆ 2-0 ಮುನ್ನಡೆ ತಂದು ಚಿನ್ನದ ಪದಕವನ್ನು ಖಚಿತಪಡಿಸಿತು. ನಂತರದ ಅಂತಿಮ ಸುತ್ತಿನಲ್ಲಿ, ಪ್ರಜ್ಞಾನಂದ ಅವರ ಆಟವನ್ನು ಗೆದ್ದರು. ಭಾರತ ಸ್ಲೊವೇನಿಯಾವನ್ನು 3.5-0.5 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.
ಹರಿಕಾ ದ್ರೋಣವಲ್ಲಿ, ಆರ್.ವೈಶಾಲಿ, ದಿವ್ಯಾ ದೇಶಮುಖ್, ವಾಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್ದೇವ್ ಅವರಿದ್ದ ಭಾರತದ ಮಹಿಳಾ ಚೆಸ್ ತಂಡವು ಅಜರ್ಬೈಜಾನ್ನನ್ನು 3.5-0.5 ರಿಂದ ಸೋಲಿಸಿ ಚಿನ್ನ ಗೆದ್ದಿತು.
ಹರಿಕಾ ದ್ರೋಣವಲ್ಲಿ, ದಿವ್ಯಾ ದೇಶಮುಖ್ ಮತ್ತು ವಂತಿಕಾ ಅಗರವಾಲ್ ಅಂತಿಮ ಸುತ್ತಿನಲ್ಲಿ ತಮ್ಮ ಪಂದ್ಯಗಳನ್ನು ಗೆದ್ದರು. ಆದರೆ, ಆರ್.ವೈಶಾಲಿ ಅವರು ಉಲ್ವಿಯಾ ಫತಾಲಿಯೇವಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡರು.