ಇಂಗ್ಲೆಂಡ್ ವಿರುದ್ಧ ಗೆದ್ದ ಬಳಿಕ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಪುಟ್ಟ ಮಗುವಿನಂತೆ ಕಣ್ಣೀರಿಟ್ಟಿದ್ದಾರೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 171 ರನ್ಗಳಿಸಿತ್ತು.
ಹಾಲಿನ ದರ ಏರಿಕೆ.. ದೂದ್ ಪೇಡ, ಧಾರವಾಡ ಪೇಡ ದುಬಾರಿ..!
172 ರನ್ಗಳ ಗುರಿ ಬೆನ್ನತ್ತಿ ಬ್ಯಾಟಿಂಗ್ಗೆ ಬಂದ ಇಂಗ್ಲೆಂಡ್ ಬ್ಯಾಟರ್ಸ್ಗೆ ಟೀಂ ಇಂಡಿಯಾ ಬೌಲರ್ಸ್ ಚಳ್ಳೆ ಹಣ್ಣು ತಿನ್ನಿಸಿದ್ರು. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಇಂಗ್ಲೆಂಡ್ 20 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 103 ರನ್ಗಳಿಸಿ ಟೀಂ ಇಂಡಿಯಾ ಎದುರು ಮಂಡಿಯೂರಿತು.
ಇಂಗ್ಲೆಂಡ್ ವಿರುದ್ಧ ಗೆದ್ದ ಬಳಿಕ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಪುಟ್ಟ ಮಗುವಿನಂತೆ ಕಣ್ಣೀರಿಟ್ಟಿದ್ದಾರೆ. ಇದನ್ನು ಕಂಡ ವಿರಾಟ್ ಕೊಹ್ಲಿ ಅವರ ಬಳಿ ಬಂದು ನಗಿಸಿದ್ದಾರೆ. 10 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಮತ್ತೆ ಫೈನಲ್ ಪ್ರವೇಶಿಸಿದೆ. ನಾಳೆ ನಡೆಯುವ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಟೀಂ ಇಂಡಿಯಾ ಈ ಬಾರಿ ಪಕ್ಕಾ ಗೆಲ್ಲುತ್ತೆ ಅಂತಿದ್ದಾರೆ ಫ್ಯಾನ್ಸ್.
ಟೀಂ ಇಂಡಿಯಾ ಫೈನಲ್ ಎಂಟ್ರಿಯಾಗೋದ್ರಲ್ಲಿ ನಾಯಕ ರೋಹಿತ್ ಶರ್ಮಾ ಪಾಲು ಹೆಚ್ಚಿದೆ ಅಂದ್ರೆ ತಪ್ಪಾಗಲ್ಲ. ರೋಹಿತ್ ಶರ್ಮಾರಂಥ ಮತ್ತೊಬ್ಬ ನಾಯಕ ಟೀಂ ಇಂಡಿಯಾ ಸಿಕ್ಕಿಲ್ಲ, ಮುಂದೆ ಸಿಗೋದು ಇಲ್ಲ
2023ರಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್ನಲ್ಲಿ ಟೀಂ ಇಂಡಿಯಾ ಫೈನಲ್ ಎಂಟ್ರಿಯಾಗಿತ್ತು. ಅಷ್ಟೇ ಯಾಕೆ ಏಕದಿನ ವಿಶ್ವಕಪ್ನಲ್ಲೂ ಟೀಂ ಇಂಡಿಯಾ ಫೈನಲ್ ಎಂಟ್ರಿಯಾಗಿದೆ. ಇದೀಗ ಟಿ20 ವಿಶ್ವಕಪ್ನಲ್ಲೂ ಭಾರತ ಫೈನಲ್ ಪ್ರವೇಶಿಸಿದೆ. ಇದರ ಹಿಂದಿನ ಪ್ರಮುಖ ಕಾರಣ ರೋಹಿತ್ ಶರ್ಮಾ. ತಂಡವನ್ನು ಹೇಗೆ ಮುನ್ನಡೆಸಬೇಕು ಅಂತ ಹಿಟ್ಮ್ಯಾನ್ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಟಫ್ ಸಮಯದಲ್ಲೂ ಟೀಂ ಇಂಡಿಯಾಗೆ ಬೆನ್ನೆಲುಬಾಗಿ ನಿಂತಿದ್ದಾರೆ ರೋಹಿತ್ ಶರ್ಮಾ.
![](https://ainlivenews.com/wp-content/uploads/2024/01/Ad-Banner-copy-scaled.jpg)