ವಿಶ್ವಕಪ್ ಗೆದ್ದ ಬಳಿಕ ಭಾರತ ಯಾಕೋ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ವಿಫಲ ಸಾಧಿಸುತ್ತಿದೆ. ಇದು ಕೋಚ್ ಹಾಗೂ ಅಭಿಮಾನಿಗಳಿಗೆ ತುಂಬಾ ಬೇಸರ ಹುಟ್ಟು ಹಾಕಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯವೇ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡದ ಯಾವೊಬ್ಬ ಬ್ಯಾಟರ್ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಇದು ಆಡಳಿತ ಮಂಡಳಿಯ ನಿದ್ದೆಗೆಡಿಸಿದ್ದರೆ ಇನ್ನೊಂದೆಡೆ ತಂಡಕ್ಕೆ ಮತ್ತೊಬ್ಬ ಅನುಭವಿ ವೇಗಿಯ ಅನುಪಸ್ಥಿತಿ ಮೊದಲ ಟೆಸ್ಟ್ನಿಂದಲೂ ಕಾಡುತ್ತಿದೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾರನ್ನು ಬಿಟ್ಟರೆ ಉಳಿದವರಿಂದ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ಬುಮ್ರಾ ಜೊತೆಗೆ ಮತ್ತೊಬ್ಬ ಅನುಭವಿಯಾಗಿ ಸಿರಾಜ್ ತಂಡದಲ್ಲಿ ಇದ್ದರಾದರೂ ಅವರು ಅವಶ್ಯಕ ಸಂದರ್ಭದಲ್ಲಿ ವಿಕೆಟ್ ಪಡೆಯುತ್ತಿಲ್ಲ. ಇದು ಬುಮ್ರಾ ಅವರ ಮೇಲೆ ಒತ್ತಡ ತರುತ್ತಿದೆ. ಹೀಗಾಗಿ ಬುಮ್ರಾಗೆ ಸಾಥ್ ನೀಡುವ ಮತ್ತೊಬ್ಬ ವೇಗಿ ಮೊಹಮ್ಮದ್ ಶಮಿಯನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳಬೇಕು ಎಂಬುದು ಅನುಭವಿಗಳ ಅಭಿಪ್ರಾಯವಾಗಿದೆ.
ಶಮಿ ಲಭ್ಯತೆ ಬಗ್ಗೆ ಮಾತನಾಡಿದ ರೋಹಿತ್, ಶಮಿ ಅವರ ಸ್ಥಿತಿಯ ಬಗ್ಗೆ ಎನ್ಸಿಎ ಸ್ಪಷ್ಟ ಮಾಹಿತಿ ನೀಡುವವರೆಗೆ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುವ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ. ಎನ್ಸಿಎಯಿಂದ ಯಾರಾದರೂ ಅವರ ಬಗ್ಗೆ ಮಾತನಾಡಬೇಕಾದ ಸಮಯ ಬಂದಿದೆ. ಅದು ನಮ್ಮ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ, ಅಲ್ಲಿ ಶಮಿ ಪುನರ್ವಸತಿಗೆ ಒಳಗಾಗಿದ್ದಾರೆ. ಹೀಗಾಗಿ ಎನ್ಸಿಎಯಿಂದಲೇ ನಮಗೆ ಏನಾದರೂ ಅಪ್ಡೇಟ್ ಕೊಡಬೇಕು ಎಂದರು.