ಎಲ್ಲಾ ವಿಶ್ವ ಕ್ರಿಕೆಟ್ನಲ್ಲಿ ಇಂದು ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸ್ಟೀವ್ ಸ್ಮಿತ್, ಜೋ ರೂಟ್ ಮತ್ತು ಕೇನ್ ವಿಲಿಯಮ್ಸನ್ ಅಂತಹ ಆಟಗಾರರು ಭಾರಿ ಸದ್ದು ಮಾಡಿದ್ದಾರೆ. ಆದರೆ, ಒಬ್ಬ ಫಾಸ್ಟ್ ಬೌಲರ್ ಆಗಿ ಟೀಮ್ ಇಂಡಿಯಾಗೆ ಪಂದ್ಯಗಳನ್ನು ಗೆದ್ದುಕೊಡುತ್ತಿರುವ ಬುಮ್ರಾ ಸಾಮರ್ಥ್ಯವನ್ನು ಕಾಲಿಂಗ್ವುಡ್ ಕೊಂಡಾಡಿದ್ದಾರೆ.
ಟ್ರೋಫಿ ಗೆಲುವಿನ ಕನಸ್ಸನ್ನು ಭಗ್ನಗೊಳಿಸುವ ಸಾಮರ್ಥ್ಯ ಭಾರತ ತಂಡಕ್ಕಿದೆ ಎಂದು ಹೇಳಿರುವ ಕಾಲಿಂಗ್ವುಡ್, ಜಸ್ಪ್ರೀತ್ ಬುಮ್ರಾ ಇರುವ ಬೌಲಿಂಗ್ ವಿಭಾಗದ ಬಗ್ಗೆ ಮೆಚ್ಚುಗೆ ಹೊರಹಾಕಿದ್ದಾರೆ. “ಟೀಮ್ ಇಂಡಿಯಾ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಅದರಲ್ಲೂ ಸದ್ಯದ ಲಯದಲ್ಲಿ ಜಸ್ಪ್ರೀತ್ ಬುಮ್ರಾ ಹೆಚ್ಚು ಅಪಾಯಕಾರಿ. ಅತ್ಯಂತ ನಿಖರವಾಗಿ, ವೇಗವಾಗಿ ಮತ್ತು ವಿವಿಧ ಬಗೆಯ ಎಸೆತಗಳನ್ನು ಎಸೆಯುವ ಸಾಮರ್ಥ್ಯ ಅವರಲ್ಲಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ʼʼಚೆಂಡು ಹೂʼʼ ಪೂಜೆಗಷ್ಟೇ ಅಲ್ಲ, ನಿಮ್ಮ ಮುಖದ ಸೌಂದರ್ಯಕ್ಕೂ ಉಪಯೋಗ..! ಹೇಗೆ ಗೊತ್ತಾ..?
ಅವರ ಎದುರು ದಿಟ್ಟ ಉತ್ತರ ನೀಡಬಲ್ಲ ಬ್ಯಾಟರ್ ಬೇರೆ ಯಾವ ತಂಡದಲ್ಲಿಯೂ ನನಗೆ ಕಾಣಿಸುತ್ತಿಲ್ಲ. ಟಿ20 ಕ್ರಿಕೆಟ್ನಲ್ಲಿನ ಇನಿಂಗ್ಸ್ ಒಂದರಲ್ಲಿ ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಚಂಡ ವೇಗದ ಬೌಲರ್ 24 ಎಸೆತಗಳನ್ನು ಎಸೆಯುವುದು ಆ ಪಂದ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ,” ಎಂದು ಕಾಲಿಂಗ್ವುಡ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)