ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್…ಚಿನ್ನದ ಬೆಲೆ ಮತ್ತೆ ಇಳಿಕೆ..!
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಓಪನರ್ ಆಗಿ ಬಂದ ವಿರಾಟ್ ಕೊಹ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ತಾನು ಆಡಿದ 9 ಬಾಲ್ನಲ್ಲಿ 1 ಸಿಕ್ಸರ್ ಸಮೇತ 9 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಟೋಪ್ಲಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ 2024ರ ಟಿ20 ವಿಶ್ವಕಪ್ನಲ್ಲಿ ಕೆಟ್ಟ ದಾಖಲೆ ಬರೆದರು.
ನಂತರ ಕ್ರೀಸ್ನಲ್ಲಿ ನಿಂತು ರೋಹಿತ್ ಶರ್ಮಾ ಅಗ್ರೆಸ್ಸಿವ್ ಬ್ಯಾಟಿಂಗ್ ಮಾಡಿದ್ರು. ತಾನು ಎದುರಿಸಿದ 39 ಬಾಲ್ನಲ್ಲಿ 2 ಸಿಕ್ಸರ್, 6 ಫೋರ್ ಸಮೇತ ಭರ್ಜರಿ 57 ರನ್ ಚಚ್ಚಿದ್ರು. ಸೂರ್ಯಕುಮಾರ್ ಯಾದವ್ ಕೂಡ 2 ಸಿಕ್ಸರ್, 4 ಫೋರ್ ಸಮೇತ 47 ರನ್ ಬಾರಿಸಿದ್ರು. ಹಾರ್ದಿಕ್ ಪಾಂಡ್ಯ 23, ಜಡೇಜಾ 17, ಅಕ್ಷರ್ ಪಟೇಲ್ 10 ರನ್ಗಳ ಸಹಾಯದಿಂದ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಿತು. ಕಠಿಣ ಪಿಚ್ನಲ್ಲಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇಂಗ್ಲೆಂಡ್ ತಂಡಕ್ಕೆ 172 ರನ್ಗಳ ಬಿಗ್ ಟಾರ್ಗೆಟ್ ನೀಡಿತ್ತು.
ಇನ್ನು, ಟೀಮ್ ಇಂಡಿಯಾ ಬಿಗ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಭಾರತ ತಂಡದ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದೆ. ಹಾಗಾಗಿ ಇಂಗ್ಲೆಂಡ್ ತಂಡ 16.4 ಓವರ್ನಲ್ಲಿ ಕೇವಲ 103 ರನ್ಗಳಿಗೆ ಆಲೌಟ್ ಆಗಿದೆ
ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ತಲಾ 3 ವಿಕೆಟ್ ತೆಗೆದು ಕಮಾಲ್ ಮಾಡಿದ್ರು. ಬೂಮ್ರಾ ಕೂಡ 2 ವಿಕೆಟ್ ತೆಗೆದರು. ಭಾರತ ತಂಡಕ್ಕೆ ಬರೋಬ್ಬರಿ 68 ರನ್ಗಳ ಜಯ ಸಿಕ್ಕಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)