ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವು ಚೆನ್ನೈನ MA ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಚಳಿಗಾಲದಲ್ಲಿ ಅಲೋವೆರಾ ಜೆಲ್ ತಲೆಗೆ ಹಚ್ಚಿಕೊಳ್ಳಬಾರದ!? ಗೊಂದಲ ಬಿಡಿ ಉತ್ತರ ತಿಳಿಯಿರಿ!
ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದೆ. ಆರಂಭಿಕ 7 ಓವರ್ಗಳಲ್ಲಿಯೇ ಮೂರು ಪ್ರಮುಖ ವಿಕೆಟ್ ಕಿತ್ತು ಇಂಗ್ಲೆಂಡ್ಗೆ ಶಾಕ್ ನೀಡಿದೆ. 8 ಓವರ್ಗೆ 67 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಹೀನಾಯ ಸ್ಥಿತಿಯಲ್ಲಿದೆ.
ಆರಂಭಿಕ 7 ಓವರ್ಗಳಲ್ಲಿಯೇ ಮೂರು ಪ್ರಮುಖ ವಿಕೆಟ್ ಕಿತ್ತು ಇಂಗ್ಲೆಂಡ್ಗೆ ಶಾಕ್ ನೀಡಿದೆ. 8 ಓವರ್ಗೆ 67 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಹೀನಾಯ ಸ್ಥಿತಿಯಲ್ಲಿದೆ
ಆರಂಭಿಕ ಆಟಗಾರ ಪಿಲಿಪ್ಸ್ ಸಾಲ್ಟ್ರನ್ನ ಅರ್ಶದೀಪ್ ಸಿಂಗ್ ಕೇವಲ ನಾಲ್ಕು ರನ್ ಗಳಿಸುವಷ್ಟರಲ್ಲಿ ಪೆವಲಿನ್ಗೆ ಅಟ್ಟಿದ್ದಾರೆ. ವಾಷಿಂಗ್ಟನ್ ಸುಂದರ್ಗೆ ಕ್ಯಾಚಿಟ್ಟು ಸಾಲ್ಟ್ ಪೆವಲಿನ್ ಸೇರಿದರು. ಇನ್ನು ಬೆನ್ ಡೆಕೆಟ್ ಕೂಡ ಸ್ಕ್ರೀಜ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ 3 ರನ್ ಗಳಿಸುವಷ್ಟರಲ್ಲಿ ವಾಷಿಂಗ್ಟನ್ ಸುಂದರ್ ಬೌಲಿಂಗ್ಗೆ ಜುರೇಲ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಅವರ ಹಿಂದೆಯೇ ಬಂದ ಹ್ಯಾರಿ ಬ್ರೂಕ್ ಕೂಡ 13 ರನ್ ಗಳಿಸಿದಾಗ ವರುಣ್ ಚಕ್ರವರ್ತಿ ಬೌಲ್ಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವೆಲಿನ್ ಸೇರಿಕೊಂಡರು. ಸದ್ಯ ಸ್ಕ್ರೀಜ್ ಕಾಯ್ದುಕೊಂಡಿರುವ ಜೋಸ್ ಬಟ್ಲರ್ ಅದ್ಭುತ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಒಂದು ಕಡೆ ವಿಕೆಟ್ ಉರುಳುತ್ತಿದ್ದರು. ಮತ್ತೊಂದು ಕಡೆ ಗಟ್ಟಿಯಾಗಿ ನಿಂತಿರುವ ಬಟ್ಲರ್ 29 ಬೌಲ್ಗಳಿಗೆ 45 ರನ್ಗಳನ್ನು ಗಳಿಸಿದ್ದು 2 ಫೋರ್ ಹಾಗೂ 3 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಬಟ್ಲರ್ಗೆ ಸದ್ಯ ಲಿವಿಂಗ್ಸ್ಟೋನ್ ಸಾಥ್ ನೀಡುತ್ತಿದ್ದಾರೆ.