ಅಡಿಲೇಡ್: ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದ್ದು, ಮೊದಲ ದಿನದಾಟದಲ್ಲಿ ಭಾರತ 180 ರನ್ಗಳಿಗೆ ಆಲೌಟ್ ಆಗಿದೆ. ಬಳಿಕ ತನ್ನ ಸರದಿಯ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ 33 ಓವರ್ಗಳಲ್ಲಿ 86 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲೇ ಆಗ್ರ ಕ್ರಮಾಂಕದ ಬ್ಯಾಟರ್ಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.
ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಭಾರತ ತಂಡಕ್ಕೆ ಮೊದಲ ಎಸೆತದಲ್ಲಿ ಆಘಾತ ನೀಡಿದರು. ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ 161 ರನ್ ಸಿಡಿಸಿ ಅಬ್ಬರಿಸಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಪಂದ್ಯದ ಮೊದಲನೇ ಎಸೆತದಲ್ಲೇ ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಜೈಸ್ವಾಲ್ ಅವರು ಸತತವಾಗಿ 2ನೇ ಪಂದ್ಯದಲ್ಲೂ ಪ್ರಥಮ ಇನ್ನಿಂಗ್ಸ್ ನಲ್ಲೇ ಶೂನ್ಯ ಸುತ್ತಿದ ಕುಖ್ಯಾತಿಗೆ ಒಳಗಾದರು. ಎರಡೂ ಪಂದ್ಯಗಳಲ್ಲೂ ಅವರನ್ನು ಶೂನ್ಯಕ್ಕೆ ಸ್ಟಾರ್ಕ್ ಅವರೇ ಔಟ್ ಮಾಡಿದ್ದು ಎಂಬುದು ಗಮನಾರ್ಹ.
ಬೆಂಗಳೂರಿನಲ್ಲಿದೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ 2.60 ಲಕ್ಷ ರೂ. ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಅಲ್ಲಿಂದ ಬಳಿಕ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರು ಭಾರತ ಇನ್ನಿಂಗ್ಸ್ಗೆ ಜೀವಕಳೆ ತಂದರು. 2ನೇ ವಿಕೆಟ್ಗೆ ಅವರಿಂದ 69 ರನ್ ಗಳ ಜೊತೆಯಾಟ ಬಂದಾಗ ಭಾರತ ಮತ್ತೆ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಆದ್ರೆ ಕೆ.ಎಲ್ ರಾಹುಲ್ 37 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಬೆನ್ನಲ್ಲೇ ಬೋಲೆಂಡ್ ವೇಗದ ದಾಳಿಗೆ ಶುಭಮನ್ ಗಿಲ್ (31 ರನ್) ಸಹ ಔಟಾದರು.
ಈ ನಡುವೆ ನಿತೀಶ್ ಕುಮಾರ್ ರೆಡ್ಡಿ ಅವರ ದಿಟ್ಟ ಬ್ಯಾಟಿಂಗ್ ಪ್ರದರ್ಶನ ಭಾರತ ತಂಡವನ್ನು 180ರ ಗಡಿ ವರೆಗೆ ಕೊಂಡೊಯ್ದಿತು. ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೆ ಮತ್ತೊಂದೆಡೆ ನಿತೀಶ್ ಆಸೀಸ್ ವೇಗಿಗಳ ಬೌಲಿಂಗ್ ಲೆಕ್ಕಕ್ಕಿಲ್ಲದಂತೆ ಸಿಕ್ಸರ್, ಬೌಂಡರಿ ಚಚ್ಚುತ್ತಿದ್ದರು. ಈ ನಡುವೆ 54 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ನೊಂದಿಗೆ 42 ರನ್ ಬಾರಿಸಿ, ಉತ್ತಮ ಪ್ರದರ್ಶನ ನೀಡುತ್ತಿದ್ದ ನಿತೀಶ್ ರೆಡ್ಡಿ ಮತ್ತೆ ಸಿಕ್ಸರ್ ಸಿಡಿಸುವ ಬರದಲ್ಲಿ ಕ್ಯಾಚ್ ನೀಡಿ ಔಟಾದರು.