ದಾವಣಗೆರೆ:- ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಜನವರಿ 26ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ ರಾಘವೇಂದ್ರ ಮಠದ ಬಳಿ ಪುಷ್ಪತಲಾ ತುಂಗಭದ್ರ ನದಿಗೆ ಹಾರಿದ್ದಾಳೆಂದು ವರದಿಯಾಗಿತ್ತು. ಆದರೆ ಈ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬೈಕ್-ಕಾರು ಹಿಂದೆ ನಾಯಿಗಳು ಓಡಿ ಬರೋದ್ಯಾಕೆ? ಇದು ಸೂಚಿಸುವುದು ಏನು! ಕೇಳಿದ್ರೆ ಅಚ್ಚರಿ ಪಡ್ತೀರಾ?
ಘಟನೆ ನಡೆದು ಮೂರನೇ ದಿನಕ್ಕೆ ಪುಷ್ಪತಲಾಳ ಶವ ಪತ್ತೆಯಾಗಿದ್ದು,ಇದೀಗ ಇದು ಆತ್ಮಹತ್ಯೆಯಲ್ಲ. ಬದಲಿಗೆ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪತಿ ಹೇಳುತ್ತಿದ್ದಾರೆ. ಈ ಮೊದಲು ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದ ಪತಿ, ಇದೀಗ ಶವ ಪತ್ತೆ ಬಳಿಕ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎಂದು ಉಲ್ಟಾ ಹೊಡೆದಿದ್ದಾನೆ.
ಶಿಕ್ಷಕಿ ಪುಷ್ಪತಲಾ ಮನೆ ಕಟ್ಟಲು ಶಿವಮೊಗ್ಗದ ಖಾಸಗಿ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಒಂದು ಕಂತು ಡ್ಯೂ ಇರುವುದಕ್ಕೆ ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಕೂರುತ್ತಿದ್ದರು. ಅದು ಸಾಲದು ಅಂತ ಶಾಲೆಯ ಬಳಿಗೂ ಬಂದು ಟಾರ್ಚರ್ ಮಾಡುತ್ತಿದ್ದರು. ಅಲ್ಲದೇ ಪೊಲೀಸ್ ಸ್ಟೇಷನ್ ನಲ್ಲೂ ದೂರು ದಾಖಲಿಸಿದ್ದರು, ಸೆನ್ಸಿಟೀವ್ ಅಗಿದ್ದ ಶಿಕ್ಷಕಿ ಪುಷ್ಪಲತಾ ಸಾಕಷ್ಟು ನೊಂದಿದ್ದಳು. ಹೀಗಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಹಾಲೇಶ್ ಆರೋಪಿಸಿದ್ದ. ಆದ್ರೆ ಪೊಲೀಸರಿಗೆ ಪತಿ ನೀಡಿದ ದೂರಿನಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.