ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಜ್ಯೂನಿಯರ್ ಡೆವಲಪರ್ ಹುದ್ದೆಗೆ ಫ್ರೆಶರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಟಾಟಾ ಬ್ಯುಸಿನೆಸ್ ಹಬ್ ಲಿಮಿಟೆಡ್ ತನ್ನ ಮಾಹಿತಿ ಮತ್ತು ತಂತ್ರಜ್ಞಾನ ಸೇವೆಯಲ್ಲಿ ಈ ನೇಮಕಾತಿ ನಡೆಸಲಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ ಉದ್ಯೋಗಿಗಳನ್ನ ವಿಸ್ತರಿಸಲು 40,000 ಫ್ರೆಶರ್ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಕಳೆದ ತಿಂಗಳು, ಭಾರತೀಯ ಐಟಿ ಕಂಪನಿ 5,452 ಉದ್ಯೋಗಿಗಳನ್ನು ಸೇರಿಸಿದೆ ಎಂದು ವರದಿಯಾಗಿದೆ, ಇದು ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನ 6,06,998ಕ್ಕೆ ಹೆಚ್ಚಿಸಿದೆ.
Zomato: ನನ್ನ ಹೆಂಡತಿ ಹಿಸ್ಟರಿ ಚೆಕ್ ಮಾಡ್ತಾಳೆ: ಗಂಡಂದಿರ ಮನವಿಗೆ ʼʼಹೊಸ ಫೀಚರ್ʼʼ ಸೇರಿಸಿದ ಜೊಮ್ಯಾಟೋ..!
ಟಿಸಿಎಸ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್, ಹೊಸ ವೇರಿಯಬಲ್ ನೀತಿಯನ್ನ ನೋಡಿದ ಮತ್ತು ಕಚೇರಿಯಿಂದ ಕೆಲಸ ಮಾಡುವ ಯೋಜನೆಗಳನ್ನ ಮುಂದಕ್ಕೆ ಹಾಕಿದರು, ಇತರ ಪ್ರದೇಶಗಳಲ್ಲಿನ ವಿವಿಧ ಕೌಶಲ್ಯ ಅಭಿವೃದ್ಧಿ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳನ್ನ ಲೆಕ್ಕಿಸದೆ ಜಾಗತಿಕ ಪ್ರತಿಭಾ ಮಾರುಕಟ್ಟೆಯಲ್ಲಿ ಭಾರತದ ಪ್ರಾಮುಖ್ಯತೆಯನ್ನ ಉಲ್ಲೇಖಿಸಿದರು. ಕಂಪನಿಯು ಹಿಂದಿನ ವರ್ಷದಂತೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 40,000 ಫ್ರೆಶರ್ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ.
ಎಲ್ಲೆಲ್ಲಿ ಉದ್ಯೋಗಾವಕಾಶಗಳಿವೆ ?
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಚೆನ್ನೈ, ಹೈದರಾಬಾದ್, ಎನ್ಸಿಆರ್, ಬೆಂಗಳೂರು, ಪುಣೆ, ಅಹಮೆದಾಬಾದ್, ಮುಂಬೈ, ಇತರೆ ಹಲವು ನಗರಗಳಲ್ಲಿ ದೇಶದಾದ್ಯಂತ ನೇಮಕ ಮಾಡುತ್ತಿದೆ.
ಅರ್ಜಿ ಸಲ್ಲಿಸುವುದು ಹೇಗೆ?
– ಟಿಸಿಎಸ್ ಕರಿಯರ್ ವೆಬ್ ಪೇಜ್ https://ibegin.tcs.com/iBegin/jobs/search ಗೆ ಭೇಟಿ ನೀಡಿ.
– ತೆರೆದ ವೆಬ್ಪೇಜ್ನಲ್ಲಿ ನೀವು ಹುದ್ದೆ, ಹುದ್ದೆಯ ಸಿಟಿ, ಕಾರ್ಯಾನುಭವ, ಕಾರ್ಯಕ್ಷೇತ್ರ ಮಾಹಿತಿ ನೀಡಿ ನೇರವಾಗಿ ಜಾಬ್ ಸರ್ಚ್ ಮಾಡಬಹುದು. ಅಥವಾ
– ಸದರಿ ವೆಬ್ಪೇಜ್ನಲ್ಲಿ ಯಾವ್ಯಾವ ಸಿಟಿಗಳಲ್ಲಿ, ಯಾವ ಹುದ್ದೆಗಳಿವೆ, ಎಷ್ಟು ಕಾರ್ಯಾನುಭವ ಬೇಕು ಎಂದು ಕೇಳಲಾಗಿರುವುದನ್ನು ನೋಡಬಹುದು.
– ಮೊದಲನೇ ಪೇಜ್ನಲ್ಲಿ ನಿಮ್ಮ ಆಸಕ್ತ ಜಾಬ್ ರೋಲ್, ಸಿಟಿ, ಅರ್ಹತೆಗೆ ಹುದ್ದೆ ಇಲ್ಲವಾದಲ್ಲಿ, ಮುಂದಿನ ಪೇಜ್ಗೆ ಹೋಗಿ ಚೆಕ್ ಮಾಡಬಹುದು.
– ನೀವು ಹುಡುಕುತ್ತಿರುವ ಆಸಕ್ತ ಹುದ್ದೆ ಸಿಕ್ಕಲ್ಲಿ ಅದರ ಮೇಲೆ ಕ್ಲಿಕ್ ಮಾಡಿ.
– ನಂತರ ಸದರಿ ಹುದ್ದೆಯ ಕುರಿತು ಅರ್ಹತೆ, ರೋಲ್ ಕರ್ತವ್ಯ, ಇತರೆ ವಿವರಗಳು ಇರುತ್ತವೆ. ಓದಿಕೊಳ್ಳಿ.
– ನಂತರ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಇಮೇಲ್ ವಿಳಾಸ, ಪಾಸ್ವರ್ಡ್ ಮೂಲಕ ಸೈನ್ ಇನ್ ಆಗಿ, ಅರ್ಜಿ ಸಲ್ಲಿಸಿ.