ಹಾವೇರಿ:- ಬಿಜೆಪಿಯ ಬಡ ಕಾರ್ಯಕರ್ತರು ಗ್ಯಾರಂಟಿ ಲಾಭ ಪಡೆಯುತ್ತಿಲ್ವಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಬೈಕ್ ರನ್ನಿಂಗ್ ಇರುವಾಗಲೇ ಹೃದಯಾಘಾತ: ತಡೆಗೋಡೆಗೆ ಗುದ್ದಿ ಸವಾರ ದುರ್ಮರಣ!
ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ ಅಭಿವೃದ್ಧಿ ಯೋಜನೆಗೆ ಹಣ ಇರಲ್ಲ ಎಂದು ಮೋದಿ ಅಪಹಾಸ್ಯ ಮಾಡಿದರು. ಬಡವರಿಗೆ ತಲುಪುವ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಬಿಜೆಪಿಯ ಬಡ ಕಾರ್ಯಕರ್ತರು ಇದರ ಲಾಭ ಪಡೆಯುತ್ತಿಲ್ವಾ ಎಂದರು.
ಇದೇ ಕೇಂದ್ರ ಸರ್ಕಾರ ಅಕ್ಕಿ ಇಟ್ಟುಕೊಂಡು ಅಕ್ಕಿ ಕೊಡಲಿಲ್ಲ. ಯಾವುದೇ ರಾಜ್ಯದಲ್ಲಿ ಬಿಜೆಪಿಯವರು 10 ಕೆಜಿ ಅಕ್ಕಿ ಕೊಟ್ಟಿದ್ದ ಉದಾಹರಣೆ ಇದ್ದರೆ ಹೇಳಿ. ನಾನು ಇಂದೇ ರಾಜೀನಾಮೆ ಕೊಡುತ್ತೇನೆ. ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ಯಾವುದೇ ಕಾರಣಕ್ಕೂ 10 ಕೆಜಿ ಅಕ್ಕಿ ನಿಲ್ಲಿಸಲ್ಲ ಎಂದು ಭರವಸೆ ನೀಡಿದರು
ನ್ಯಾಯಯುತವಾಗಿ ಬರಬೇಕಾದ ಹಣ ನಮಗೆ ಕೊಡುತ್ತಿಲ್ಲ. ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡುತ್ತಿಲ್ಲ. ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ ನಮಗೆ ಬರುತ್ತಿರೋದು 60,000 ಕೋಟಿ ಮಾತ್ರ. ನರೇಂದ್ರ ಮೋದಿ ಜೀ ಇದು ನ್ಯಾಯಾನಾ? ಎಂದು ಪ್ರಶ್ನಿಸಿದರು.