ಬೆಂಗಳೂರು:- ನಗರದ ಟರ್ಫ್ಕ್ಲಬ್ ಮೇಲೆ ಸಿಸಿಬಿ ದಾಳಿ ನಡೆದಿದ್ದು, ೩ ಕೋಟಿಗೂ ಹೆಚ್ಚು ನಗದು ಜಪ್ತಿ ಮಾಡಲಾಗಿದೆ. ಜಿಎಸ್ಟಿ ಕಟ್ಟದೆ ವಂಚನೆ ಹಾಗೂ ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡಿರುವ ಆರೋಪದಡಿ ಸಿಸಿಬಿ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ,
ಬೆಂಗಳೂರು ಟರ್ಫ್ಕ್ಲಬ್ಗೆ ಬರುವವರಿಂದ ಹೆಚ್ಚು ಹಣ ಪಡೆದು ಕಡಿಮೆ ಮೊತ್ತಕ್ಕೆೆ ಟಿಕೆಟ್ ಮಾರಾಟ, ಸೂಕ್ತ ರೀತಿಯಲ್ಲಿ ಜಿಎಸ್ಟಿ ಕಟ್ಟದೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಕೌಂಟರ್ನಲ್ಲಿನ ಸಿಬ್ಬಂದಿ ಹೊರ ಹೋಗದಂತೆ ಲಾಕ್ ಮಾಡಿ ಪರಿಶೀಲನೆ ನಡೆಸಿದ್ದಾರೆ.
ವಿಕ್ರಾಂತ್ ಎಂಟರ್ ಪ್ರೈಸಸ್, ನಿರ್ಮಲ್ ಅಂಡ್ ಕೋ, ಶ್ರೀರಾಮ ಎಂಟರ್ ಪ್ರೈಸಸ್, ಚಾಮುಂಡೇಶ್ವರಿ ಎಂಟರ್ ಪ್ರೈಸಸ್, ಆರ್.ಆರ್ ಎಂಟರ್ ಪ್ರೈಸಸ್, ರಾಯಲ್ ಇಎನ್ ಟಿಪಿ, ಆರ್.ಕೆ.ಎಂಟರ್ ಪ್ರೈಸಸ್, ಎಎ ಅಸೋಸಿಯೇಟ್ಸ್, ಸಾಮ್ರಾಟ್ ಅಂಡ್ ಕೋ. ನೀಲಕಂಠ, ಮೆಟ್ರೊ ಅಸೋಸಿಯೇಟ್ಸ್, ಪರಸ್ ಅಂಡ್ ಕೋ, ಕಾರ್ತಿಕ್ ಆಯಂಡ್ ಕಂಪನಿ, ಅಮೃತಾಯ ಕೌಂಟರ್ ಸೇರಿದಂತೆ ಹಲವು ಕೌಂಟರ್ಗಳಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.