ಬೆಂಗಳೂರು: ಮಳೆ ಬಂತು ಅಂದ್ರೆ ಸಾಕು ಬೆಂಗಳೂರಿನ ರಸ್ತೆಗಳು ಈಜುಕೊಳದಂತಾಗ್ತವೆ.ಇದಕ್ಕೆ ಕಾರಣ ರಸ್ತೆಯಲ್ಲಿನ ಗುಂಡಿಗಳು, ಬ್ರ್ಯಾಂಡ್ ಬೆಂಗಳೂರಿಗೆ ದಕ್ಕೆ ತರ್ತಿರೋ ರಸ್ತೆಗುಂಡಿಗೆ ಇತಿ ಶ್ರೀ ಹಾಡೊದಕ್ಕೆ ಬಿಬಿಎಂಪಿ ಹೊರಟಿದ್ದು ಅಧಿಕಾರಿಗಳಿಗೆ ಬಿಬಿಎಂಪಿ ಕಮೀಷನರ್ ಗುಂಡಿ ಮುಚ್ಚೋ ಟಾಸ್ಕ ಕೊಟ್ಟಿದ್ದಾರೆ.
ಬೆಂಗಳೂರಲ್ಲಿ ಮಳೆ ಬಂದ್ರೆ ಸಾಕು ಒಂದಿಲ್ಲೊಂದು ಸಮಸ್ಯೆಗಳು ಹುಟ್ಕೊಳ್ತದೆ..ರಸ್ತೆಗಳೆಲ್ಲ ಈಜು ಕೊಳದಂತಾಗಿ ಜನರಿಗೆ ಸಮಸ್ಯೆ ಎದುರಾಗುತ್ತೆ..ಇದಕ್ಕೆ ಕಾರಣ ರಸ್ತೆಗುಂಡಿ ,ಬೆಂಗಳೂರಿನ ಬಹುತೇಕ ರಸ್ತೆಗಳ ಪರಿಸ್ಥಿರಿ ಹೇಗಿದೆ ಎಂದ್ರೆ ರಸ್ತೆಯಲ್ಲಿ ಗುಂಡಿಇದಿಯೋ ಅಥವಾ ಗುಂಡಿಯಲ್ಲಿ ರಸ್ತೆ ಇದಿಯೋ ಎನ್ನೋದೆ ಗೊತ್ತಾಗದ ಪರಿಸ್ಥಿತಿ.
ರಾಜಧಾನಿಯ ರಸ್ತೆ ಗುಂಡಿ ಮುಚ್ಚಿ ರಸ್ತೆ ದುರಸ್ತಿ ಮಾಡುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ರು ಇದೀಗ ತಡವಾಗಿ ಎಚ್ಚೆತ್ಕೊಂಡಿರೋ ಬಿಬಿಎಂಪಿ ನಗರದಲ್ಲಿರೋ 5ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನ ಮೇ 31ರೊಳಗೆ ಮುಚ್ಚೋದಾಗಿ ಹೇಳಿದೆ.
ಮತ್ತೊಂದು ಬಿಗ್ ಅಪ್ಡೇಟ್.! LPG ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಜೂನ್ 1 ರೊಳಗೆ ಈ ಕೆಲಸ ಕಡ್ಡಾಯ!
ರಸ್ತೆ ಗುಂಡಿ ಮುಚ್ಛುವ ಸಂಬಂದ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಿರೋ ಕಮೀಷನರ್ ತುಷಾರ್ ಗಿರಿನಾಥ್ ಮೇ 31ರೊಳಗೆ ಗುಂಡಿ ಮುಚ್ಚುವಂತೆ 6ವಲಯಗಳಿಗೆ ಡೆಡ್ ಲೈನ್ ಕೊಟ್ಟಿದ್ದು,ಉಳಿದ ಎರಡು ವಲಯಗಳಾದ ರಾಜರಾಜೇಶ್ವರಿ ವಲಯ ಮತ್ತು ದಾಸರಹಳ್ಳಿ ವಲಯಕ್ಕೆ ಜೂನ್ ನಾಲ್ಕರೊಳಗೆ ರಸ್ತೆ ಗುಂಡಿ ಮುಚ್ಚುವಂತೆ ಸೂಚಿಸಿದ್ದಾರೆ.
ಒಟ್ನಲ್ಲಿ ಮಳೆ ಬಿಳ್ತಿದ್ದಂತೆ ಬೆಂಗಳೂರಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ಇದೀಗ ಸಿಎಂ, ಡಿಸಿಎಂ ಖಡಕ್ ಸೂಚನೆಯಿಂದ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ಕೊಂಡಿದ್ದಾರೆ.ಮೇ 31ರೊಳಗೆ ಗುಂಡಿ ಮುಚ್ಚೋದಾಗಿ ಅಧಿಕಾರಿಗಳೇ ಹೇಳಿದ್ದ,ಮಾತಿನಂತೆ ಇನ್ನೋಂದು ವಾರದೊಳಗೆ ರಸ್ತೆಗುಂಡಿಗಳನ್ನ ಕಂಪ್ಲೀಟ್ ಆಗಿ ಮುಚ್ಚಿ ರಸ್ತೆ ಗುಂಡಿ ಮುಕ್ತ ಬೆಂಗಳೂರಿನ್ನ ಮಾಡ್ತಾರ ಎನ್ನೋದನ್ನ ಕಾದು ನೊಡಬೇಕಿದೆ.