ವರ್ತೂರು ಸಂತೋಷ್ ಮದುವೆ ಆಗಿರುವ ಪ್ರಸಂಗ ಮನೆ ಹೊರಗೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ರೆ, ಇತ್ತ ಮನೆಯೊಳಗೆ ತನಿಷಾ- ಸಂತೋಷ್ ಲವ್ವಿ ಡವ್ವಿ ಜೋರಾಗಿ ನಡೆಯುತ್ತಿದೆ. ನಮ್ಮಿಬ್ಬರ ನಡುವೆ ಅಂತಹದ್ದೇನು ಇಲ್ಲ ಕಣ್ರೋ ಅಂದ್ರು ನಮ್ರತಾ ಬಿಟ್ಟು ಬಿಡದೇ ವರ್ತೂರು ಸಂತೋಷ್ (Varthur Santhosh) ಹೆಸರು ಹೇಳಿ ತನಿಷಾರ (Tanisha Kuppanda) ಕಾಲೆಳೆದಿದ್ದಾರೆ.
ದೊಡ್ಮನೆಗೆ ನಿನ್ನೆ ಸಂತೋಷ್ ಅವರ ತಾಯಿ ಎಂಟ್ರಿ ಕೊಟ್ಟಿದ್ದರು. ಆಗ ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತೀನಿ ಎಂದು ಪಟ್ಟು ಹಿಡಿದಿದ್ದ ಸಂತೋಷ್ಗೆ ಬುದ್ಧಿ ಹೇಳಿ ಮನವಿ ಮಾಡಿದ್ದರು. ಈ ವೇಳೆ, ಅವರ ಸಂಭಾಷನೆ ಕೇಳಿ ನಮ್ರತಾ (Namratha Gowda) ಅಚ್ಚರಿ ಪಟ್ಟಿದ್ದಾರೆ. ಯಾವ ಭಾಷೆ ಇದು ಅರ್ಥನೇ ಆಗ್ತಿಲ್ಲ ಕೇಳೋಕೆ ವಿಚಿತ್ರವಾಗಿದೆ ಎಂದು ತನಿಷಾ ಬಳಿ ಹೇಳಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಅದಕ್ಕೆ ತನಿಷಾ, ಅದು ಅವರ ಆಡು ಭಾಷೆ ಕನ್ನಡ, ತೆಲುಗು, ತಮಿಳು ಮಿಕ್ಸ್ ಆಗಿದೆ ಎಂದಿದ್ದಾರೆ. ಅದಕ್ಕೆ ಅದು ಅರ್ಥವೇ ಆಗೋದಿಲ್ಲ ಎಂದು ಮಾತನಾಡಿದ್ದಾರೆ. ಅದಕ್ಕೆ, ಹೀಗಾದ್ರೆ ಮುಂದೆ ಹೇಗೆ? ಮದುವೆ ಆಗಿ ಅವರ ಮನೆಗೆ ಹೋದರೆ ಪರಿಸ್ಥಿತಿ ಏನು ಎಂದು ತನಿಷಾಗೆ ಕಾಲೆಳೆದಿದ್ದಾರೆ ನಮ್ರತಾ. ಯೇ ಹೋಗೇ ಎಂದಷ್ಟೇ ಹೇಳಿ ನಕ್ಕಿದ್ದಾರೆ
ಈ ಹಿಂದೆ ಶೋಭಾ ಶೆಟ್ಟಿ, ಕನ್ನಡದ ನಟಿ ಶ್ರೀಲೀಲಾ (Sreeleela) ಅವರ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದರು. ಶ್ರೀಲೀಲಾ ಅವರನ್ನು ಬಿಗ್ಬಾಸ್ ವೇದಿಕೆಯ ಮೇಲೆ ಅತಿಥಿಯಾಗಿ ಕರೆತರಲಾಗಿತ್ತು. ಆಗ ಇವರಿಬ್ಬರೂ ಕನ್ನಡದಲ್ಲಿ ಮಾತನಾಡಿದದರು. ಹೇಗಿದ್ದೀರಾ ಎಂದೆಲ್ಲಾ ಇಬ್ಬರೂ ಕನ್ನಡದಲ್ಲಿಯೇ ಯೋಗ ಕ್ಷೇಮ ವಿಚಾರಿಸಿಕೊಂಡಿದ್ದರು. ಕನ್ನಡದವರೊಬ್ಬರು ತೆಲುಗು ಬಿಗ್ಬಾಸ್ ಮನೆಯೊಳಗೆ ಇರುವುದನ್ನು ಕಂಡು ಶ್ರೀಲೀಲಾ ಕರ್ನಾಟಕ ಮೀಟ್ಸ್ ಕರ್ನಾಟಕ ಎಂದು ಖುಷಿಯಿಂದ ಮಾತನಾಡಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)