ಚಿಕ್ಕಮಗಳೂರು:- ಚಿಕ್ಕಮಗಳೂರು, ಬೀದರ್ನಲ್ಲಿ ಜೋರು ಮಳೆ ಆಗಿದ್ದು, ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.
ಐದಳ್ಳಿ, ಕಣತಿ, ಮಾಗೋಡು ಹುಣಸೇಹಳ್ಳಿ, ಕಡಬಗೆರೆ ಸುತ್ತಮುತ್ತ ಮಳೆ ಸುರಿದಿದೆ. ಸಾಧಾರಣಕ್ಕಿಂತ ಜೋರಾಗೇ ಸುರಿದ ಮಳೆಯಿಂದ ಜನರು ಸಂತಸ ಪಟ್ಟಿದ್ದಾರೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತವರಣವಿತ್ತು. ಬಿಸಿಲ ಧಗೆಗೆ ಕಾಫಿ-ಮೆಣಸು ಉಳಿಸಿಕೊಳ್ಳುವುದು ಸವಾಲಾಗಿತ್ತು. ಮಳೆಯಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.