ಟಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ ನಟನೆಯಾ ಜೊತೆಗೆ ಡ್ಯಾನ್ಸ್ ಗೂ ಸೈ ಅನ್ನೋದು ಈಗಾಗಲೇ ಗೊತ್ತಾಗಿದೆ. ತಮನ್ನಾಗೆ ಐಟಂ ಡ್ಯಾನ್ಸ್ ನಲ್ಲಿ ನಟಿಸಲು ಸಾಕಷ್ಟು ಆಫರ್ ಗಳು ಬರ್ತಿವೆ. ಈ ಹಿಂದೆ ಜೈಲರ್ ಸಿನಿಮಾದಲ್ಲಿ ಕಾವಾಲಯ್ಯ ಹಾಡಿಗೆ ಮಸ್ತ್ ಆಗಿ ಸ್ಟೆಪ್ ಹಾಕಿದ್ದ ನಟಿ ಇದೀಗ ಮತ್ತೊಂದು ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದಾರೆ.
ತಮನ್ನಾ ‘ಸ್ತ್ರಿ 2’ ಸಿನಿಮಾದಲ್ಲಿ ಹೊಸ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮತ್ತೆ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ನಟಿಯ ಹೊಸ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ತಮನ್ನಾ ಯಾವುದಾದರೂ ಹಾಡಿಗೆ ಹೆಜ್ಜೆ ಹಾಕ್ತಾರೆ ಅಂದರೆ ಆ ಹಾಡು ಸೂಪರ್ ಹಿಟ್ ಆಗುತ್ತೆ ಎಂದೇ ಅರ್ಥ. ಅದಕ್ಕೆ ‘ಕೆಜಿಎಫ್’ ಸಿನಿಮಾದ ಜೋಕೆ ಮತ್ತು ‘ಜೈಲರ್’ ಸಿನಿಮಾದ ಕಾವಾಲಯ್ಯ ಹಾಡುಗಳೇ ಸಾಕ್ಷಿ. ಇದೀಗ ರಾಜ್ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟನೆಯ ‘ಸ್ತ್ರಿ 2’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಆಜ್ ಕಿ ರಾತ್’ ಎಂಬ ಹಾಡಿನಲ್ಲಿ ನಟಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಸ್ತ್ರೀ 2 ಸಿನಿಮಾವನ್ನು ಅಮರ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ‘ಸ್ತ್ರೀ’ ಹಿಟ್ ಆಗಿದ್ದರಿಂದ ‘ಸ್ತ್ರೀ 2’ ಕೂಡ ಜನರನ್ನು ಸೆಳೆಯಲಿದೆ ಎಂಬ ನಂಬಿಕೆ ಇದೆ. ಅದಕ್ಕೆ ತಕ್ಕಂತೆ ತಮನ್ನಾ ಭಾಟಿಯಾ ಅವರ ಸಾಂಗ್ ಸದ್ದು ಮಾಡುತ್ತಿದೆ. ಯೂಟ್ಯೂಬ್ನಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆಯುತ್ತಿದೆ.