ಗಂಗಾವತಿ:- ತಾಕತ್ ಇದ್ರೆ ನಾಗೇಂದ್ರ ಮೇಲಿನ ಕೇಸ್ ವಾಪಸ್ ಪಡೆಯಿರಿ ಎಂದು ಸಿಎಂಗೆ ಗಾಲಿ ಜನಾರ್ಧನ್ ರೆಡ್ಡಿ ಚಾಲೆಂಜ್ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ದ್ವೇಷದ ಕಾರಣಕ್ಕಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ಮನವಿ ಹಿನ್ನೆಲೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕೇಸ್ ಹಾಕಲು ಪರವಾನಿಗೆ ನೀಡಿದ್ದರಿಂದ ಈಗ ರಾಜ್ಯ ಸರಕಾರದ ಪರವಾನಿಗೆ ವಾಪಸ್ ಪಡೆಯಲಾಗಿದೆ ಎಂದು ಸಿದ್ದರಾಮಯ್ಯ ಸೇರಿ ಸರಕಾರದ ಸಚಿವರು ಪದೇ ಪದೇ ಹೇಳಿಕೆ ಕೊಡುತ್ತಿದ್ದಾರೆ. ಮಾತೆತ್ತಿದರೆ ಅಹಿಂದ ವರ್ಗದ ಹಿತರಕ್ಷಕರೆಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ವಾಲ್ಮೀಕಿ ಜನಾಂಗದ ನಾಯಕ ಹಾಗೂ ಸಚಿವ ಬಿ.ನಾಗೇಂದ್ರ ಮತ್ತು ನನ್ನ ಮೇಲೆ ಸಿಬಿಐ ಕೇಸ್ ಹಾಕಲು ಪರವಾನಿಗೆ ನೀಡಿದ್ದನ್ನು ಕೂಡಲೇ ವಾಪಸ್ ಪಡೆದು ಅಹಿಂದ ಹಿತ ರಕ್ಷಕ ಎಂದು ಸಾಬೀತು ಮಾಡಲಿ” ಎಂದರು.
ನಾಗೇಂದ್ರ ಅವರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯುತ್ತಿರಾ ಅಥವಾ ಅವರನ್ನು ಸಚಿವ ಸಂಪುಟ ದಿಂದ ತೆಗೆದುಹಾಕುತ್ತಿರಾ ಎನ್ನುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಡಬೇಕಿದೆ. ಮೋದಿಯವರೇ ನನ್ನನ್ನು ನೋಡಿ ಹೆದರಿಕೊಳ್ಳುತ್ತಾರೆಂದು ಹೇಳುವ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರಿಗೆ ಹೆದರುವುದಿಲ್ಲ. ಅವರು ಬಹಳ ಸ್ಟ್ರಾಂಗ್ ಸಿಎಂ ಆಗಿದ್ದಾರೆ. ಹೈಕಮಾಂಡ್ ಒತ್ತಡವೋ, ಡಿಕೆ ಅವರ ಮೇಲಿನ ಪ್ರೀತಿನೋ ಗೊತ್ತಿಲ್ಲ ಎಂದರು.