ಕಲಘಟಗಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಾಭ ಪಡೆದುಕೊಳ್ಳಿ ಎಂದು ಯೋಜನಾಧಿಕಾರಿ ಪ್ರಶಾಂತ ನಾಯ್ಕ ಹೇಳಿದರು. ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಡವಿ ಸಿದ್ದೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಡಾ.ವೀರೇಂದ್ರ ಹೆಗ್ಗಡೆಯವರು ನೀಡಿದ 1 ಲಕ್ಷ ರೂಪಾಯಿ ಡಿಡಿ ವಿತರಿಸಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ದೇವಾಲಯಗಳ ಜೀರ್ಣೋದ್ದಾರಕ್ಕೆ ಸಹಾಯಧನ, ಕೆರೆಗಳ ಅಭಿವೃದ್ಧಿ, ಸಮುದಾಯ ಭವನಗಳಿಗೆ ನೆರವು,
ವಾತ್ಸಲ್ಯದಡಿ ನಿರಾಶ್ರಿತರಿಗೆ ಮನೆ ನಿರ್ಮಾಣ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವಿಶಿಷ್ಟಚೇತರಿಗೆ ಮಾಸಾಶನ, ಸಿಎಸ್ಸಿ ಅಡಿ ಹಲವು ಆನಲೈನ್ ಸೇವೆ ಸೇರಿದಂತೆ ಅನೇಕ ಕೊಡುಗೆಗಳನ್ನು ಸಂಸ್ಥೆ ನೀಡಿದ್ದು, ಪ್ರತಿಯೊಬ್ಬರೂ ಯೋಜನೆಯ ಲಾಭ ಪಡೆದುಕೊಳ್ಳಿ ಎಂದರು.ಹಿರಿಯರಾದ ತಿಪ್ಪಣ್ಣ ಅರಳಿಕಟ್ಟಿ, ಬಸಪ್ಪ ಟವಳಿ ಮಾತನಾಡಿದರು. ಟ್ರಸ್ಟ್ ಕಮೀಟಿ ಅಧ್ಯಕ್ಷ ನೀಲಕಂಠಯ್ಯ ಕಂಬಿ, ಗ್ರಾಪಂ ಸದಸ್ಯ ಮಂಜುನಾಥ ಧೂಳಿಕೊಪ್ಪ ಮೇಲ್ವಿಚಾರಕರಾದ ನಿಶ್ಚಿತಾ ವೇದಿಕೆ ಮೇಲಿದ್ದರು.
ರೈತರಿಗೆ ಕೇಂದ್ರದಿಂದ ಮತ್ತೊಂದು ಬಂಪರ್ ಯೋಜನೆ! ಶೇಕಡಾ 50 ರಷ್ಟು ಸಬ್ಸಡಿ ಘೋಷಿಸಿದ ಸರ್ಕಾರ
ಚನ್ನಬಸಪ್ಪ ಖಂಡೂನವರ, ಬಸಯ್ಯ ಅಂಕಲಿಮಠ, ಈರಪ್ಪ ಶೀಲವಂತರ, ಚಂದ್ರಪ್ಪ ಹಡಪದ, ಉಳವಪ್ಪ ಮೆಣಸಿನಕಾಯಿ, ಶಾಂತಮ್ಮಾ ಅಂಕಲಿಮಠ, ಶಕುಂತಲಮ್ಮಾ ಸೂರ್ಯವಂಶಿ, ನಿಂಗಮ್ಮಾ ಹಡಪದ, ಗಂಗಮ್ಮಾ ಹಡಪದ, ಮಲ್ಲಪ್ಪ ತಡಕೋಡ, ಮಹಾಲಿಂಗಪ್ಪ ಯಳವತ್ತಿ, ಶಿವಪ್ಪ ಅಮ್ಮಿನಬಾವಿ, ಶಿವಪ್ಪ ತಡಕೋಡ, ಚನ್ನಪ್ಪ ಮಡಿವಾಳರ, ಶಂಕ್ರಪ್ಪವಾಲಿ, ಜಗದೀಶ ಮೆಣಸಿನಕಾಯಿ, ಪ್ರಕಾಶ ಮಂಟೂರ, ಮಂಜುನಾಥ ಅಮ್ಮಿನಬಾವಿ ಈರಯ್ಯ ಕೋರಿಮಠ, ಶಿವರುದ್ರಪ್ಪ ಮಳ್ಳಳ್ಳಿ ಈರಯ್ಯ ಸುರಗಿಮಠ, ಯಲ್ಲಪ್ಪ ಕುಂಬಾರ, ರಾಜು ತವಡೆ ಅಲ್ಲಿಸಾಬ್ ಅಗಸರ, ಯಲ್ಲಪ್ಪ ಕಂಬಾರ, ಮಂಜುನಾಥ ಅರಳಿಕಟ್ಟಿ ಶ್ರೀಶೈಲ ಮುಕ್ಕಣ್ಣವರ, ಸೇವಾ ಪ್ರತಿನಿಧಿ ಸುಕನ್ಯಾ ರಜಪೂತ ಇದ್ದರು.
ವರದಿ: ಮಾರುತಿ ಲಮಾಣಿ