ಇಂದು ನಡೆಯಲಿರುವ ಸೆಮಿಫೈನಲ್ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಟೂರ್ನಮೆಂಟ್ನಲ್ಲಿ ಸೋಲಿಲ್ಲದ ತಂಡಗಳಾಗಿ ಸೆಮಿಫೈನಲ್ ಪ್ರವೇಶಿಸಿವೆ. ಆದರೆ ಈ ಎರಡು ತಂಡಗಳಿಗೆ ಸೆಮಿಫೈನಲ್ ಪಂದ್ಯಗಳು ಯಾವಾಗಲೂ ದೊಡ್ಡ ಗಂಡಾಂತರವಾಗಿರುತ್ತವೆ. 2016 ಮತ್ತು 2022ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ್ದ ಭಾರತ, ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ದಕ್ಷಿಣ ಆಫ್ರಿಕಾ 2009, 2014ರಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಗೃಹ ಸಚಿವರೇ ಇತ್ತ ನೋಡಿ.. ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ.. ಮಾರಾಟವಾಗಿದ್ದ 9 ಮಕ್ಕಳು ಪತ್ತೆ!
2022 ರ ಟಿ20 ವಿಶ್ವಕಪ್ನಲ್ಲಿ ಭಾರತವು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು 10 ವಿಕೆಟ್ ಗಳಿಂದ ಸೋಲಿಸಿತು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಆಟಗಾರರೊಬ್ಬ ಟೀಮ್ ಇಂಡಿಯಾಗೆ ದುಸ್ವಪ್ನವಾಗಿ ಕಾಡುತ್ತಿದ್ದಾರೆ.
ಹೌದು, ಆ ಆಟಗಾರನೇ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಐಪಿಎಲ್ನಲ್ಲಿ ಅಬ್ಬರಿಸಿ ದ್ವಿತೀಯಾರ್ಧದಲ್ಲಿ ಫಾರ್ಮ್ ಕಳೆದುಕೊಂಡಿದ್ದ ಬಟ್ಲರ್, ಇದೀಗ ಸೆಮಿಫೈನಲ್ಗೆ ಮುಂಚಿತವಾಗಿ ಒಳ್ಳೆಯ ಫಾರ್ಮ್ಗೆ ಮರಳಿದ್ದಾರೆ. ಟೂರ್ನಿ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡದ ಬಟ್ಲರ್, ಯುಎಸ್ ವಿರುದ್ಧದ ಕೊನೆ ಪಂದ್ಯದೊಂದಿಗೆ ಅದ್ಭುತ ಫಾರ್ಮ್ಗೆ ಮರಳಿದ್ದಾರೆ. ಯುನೈಟೆಡ್ ಸ್ಟೇಟ್ಸ್ ವಿರುದ್ಧ 38 ಎಸೆತಗಳಲ್ಲಿ 83 ರನ್ ಗಳಿಸಿದರು. 6 ಬೌಂಡರಿಗಳು. ಅವರು 8 ಸಿಕ್ಸರ್ ಗಳನ್ನು ಬಾರಿಸಿದ್ದರು.
2022ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಜೋಸ್ ಬಟ್ಲರ್ ಕೂಡ ಭಾರತದ ಬೌಲರ್ಗಳ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು. ಅಲೆಕ್ಸ್ ಹೇಲ್ಸ್ ಜೊತೆಗೂಡಿ 170 ರನ್ಗಳ ಗುರಿಯನ್ನ ಅಜೇಯವಾಗಿ ತಲುಪಿಸಿದ್ದರು. ಭಾರತದ ವಿರುದ್ಧಇಂತಹ ಪ್ರದರ್ಶನ ಮತ್ತೊಮ್ಮೆ ಪುನರಾವರ್ತನೆ ಮಾಡಲು ಆಂಗ್ಲ ತಂಡ ಕಾಯುತ್ತಿದೆ.
ಭಾರತವು ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕೆಂದರೆ ಜೋಸ್ ಬಟ್ಲರ್ ಆದಷ್ಟು ಬೇಗ ಔಟ್ ಆಗಬೇಕಿದೆ. ಇಲ್ಲದಿದ್ದರೆ, ಅವರು ಭಾರತೀಯ ತಂಡಕ್ಕೆ ದೊಡ್ಡ ಕಂಟಕಪ್ರಾಯರಾಗಲಿದ್ದಾರೆ.
ಬಟ್ಲರ್ ಹೊರತುಪಡಿಸಿ, ಮತ್ತೊಬ್ಬ ಆರಂಭಿಕ ಆಟಗಾರ ಫಿಲ್ ಸಾಲ್ಟ್ರನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಕ್ರೀಸ್ ನಲ್ಲಿದ್ದರೆ, ಅವರು ಆಕ್ರಮಣಕಾರಿಯಾಗಿ ಆಡಬಲ್ಲರು. ಅವರು ವಿಂಡೀಸ್ ವಿರುದ್ಧ 87 ರನ್ ಸಿಡಿಸಿದ್ದರು. ಈ ವರ್ಷದ ಐಪಿಎಲ್ನಲ್ಲಿಯೂ ಅವರು ಕೆಕೆಆರ್ ಪರ ಆರಂಭಿಕರಾಗಿ ಉತ್ತಮ ರನ್ ಗಳಿಸಿದ್ದರು. ಹಾಗಾಗಿ ಸೆಮಿಫೈನಲ್ನಲ್ಲಿ ಭಾರತ ವಿಶೇಷ ಪ್ಲಾನ್ನೊಂದಿಗೆ ಕಣಕ್ಕಿಳಿಯಬೇಕಿದೆ
![](https://ainlivenews.com/wp-content/uploads/2024/01/Ad-Banner-copy-scaled.jpg)