ಬೈರುತ್ : ಸಿರಿಯಾ ರಾಜಧಾನಿ ಡಮಾಸ್ಕಸ್ ಗೆ ಬಂಡುಕೋರರು ಪ್ರವೇಶಿಸುತ್ತಿದ್ದಂತೆ, ಅಧ್ಯಕ್ಷ ಬಶರ್ ಅಸ್ಸಾದ್ ಅವರು ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ ಎಂದು ಸಿರಿಯಾ ವಿರೋಧ ಪಕ್ಷದ ಯುದ್ಧ ನಿರ್ವಹಣೆ ವಿಭಾಗದ ಮುಖ್ಯಸ್ಥರು ಆರೋಪಿಸಿದ್ದಾರೆ.
ಬಂಡುಕೋರರ ಡಮಾಸ್ಕರ್ ಪ್ರವೇಶಿಸುತ್ತಿದ್ದರಂತೆ ರಾಜಧಾನಿಯಲ್ಲಿ ಗುಂಡೇಟು ಮತ್ತು ಸ್ಫೋಟದ ಶಬ್ದಗಳು ಕೇಳಿಸುತ್ತಿವೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಈ ಬಗ್ಗೆ ಸಿರಿಯಾ ಸರ್ಕಾರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿರಯಾ ಅಧ್ಯಕ್ಷ ಅಸ್ಸಾದ್ ಭಾನುಆರ ಮುಂಜಾನೆ ಡಮಾಸ್ಕಸ್ನಿಂದ ವಿಮಾನದ ಮೂಲಕ ಪಲಾಯನ ಮಾಡಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ರಾಮಿ ಅಬ್ದುರ್ರಹ್ಮಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಂಡುಕೋರರು ರಾಜಧಾನಿಗೆ ಪ್ರವೇಶ ಪಡೆದ ಮಾಹಿತಿ ಬರುತ್ತಿದ್ದಂತೆ ಅಬ್ದುರ್ರಹ್ಮಾನ್ ಅವರು ಅಧ್ಯಕ್ಷ ಬಶರ್ ಅಸ್ಸಾದ್ ಅವರ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದೆ.