ನವದೆಹಲಿ: ಇಂಧನ ಚಾಲಿತ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾದ್ರೆ ಆರ್ಥಿಕವಾಗಿ ಲಾಭ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಳೆಯುಳಿಕೆ ಇಂಧನ ಚಾಲಿತ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರಿಂದ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು.
ದೇಶದಲ್ಲಿ ವಾಹನ ಫಿಟ್ನೆಸ್ ಕೇಂದ್ರಗಳು ಮತ್ತು ಚಾಲನಾ ಕೇಂದ್ರಗಳಿಗೆ ಹೊಸ ಯೋಜನೆ ಪರಿಚಯಿಸುವ ಕುರಿತು ಮಾತನಾಡಿದ ಅವರು, ನಾವು ಈ ಉಪಕ್ರಮಕ್ಕಾಗಿ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ, ದೇಶದ ಪ್ರತಿ ಜಿಲ್ಲೆಯಲ್ಲಿ ನಾಲ್ಕರಿಂದ ಐದು ಫಿಟ್ನೆಸ್ ಕೇಂದ್ರಗಳಿದ್ದರೆ, ಹತ್ತರಿಂದ ಇಪ್ಪತ್ತು ಚಾಲಕ ತರಬೇತಿ ಕೇಂದ್ರಗಳು ಇರುತ್ತವೆ ಎಂದು ಅವರು ತಿಳಿಸಿದರು.
ಕಡಿಮೆ ಬಜೆಟ್ʼನಲ್ಲಿ ರಸಗೊಬ್ಬರದ ವ್ಯಾಪಾರ ಮಾಡಿ 15 ಲಕ್ಷದವರೆಗೂ ಲಾಭ ಪಡೆಯಿರಿ.!
ಭಾರತೀಯ ರಸ್ತೆಗಳಿಂದ ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ತೆಗೆದುಹಾಕುವ ಉದ್ದೇಶದಿಂದ ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯನ್ನು 2021 ರಲ್ಲಿ ಪ್ರಾರಂಭಿಸಲಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಸ್ವಚ್ಛವಾದ ಸಾರಿಗೆ ವಿಧಾನಗಳನ್ನು ಉತ್ತೇಜಿಸಲು ಉದ್ದೇಶವನ್ನು ಈ ನೀತಿ ಹೊಂದಿದೆ ಎಂದರು.