ಬೆಂಗಳೂರು: ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನಕ್ಕೆ ಇಂದು ತೆರೆಬಿದ್ದಿದೆ.ಉತ್ತರ ಕರ್ನಾಟಕ ಚರ್ಚೆಗೆ ಉತ್ತರ ನೀಡುವ ವೇಳೆ,ನಾಡಿನ ಅನ್ನದಾತರಿಗೆ ಸಿಎಂ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಬಿಜೆಪಿ,ಜೆಡಿಎಸ್ ಧರಣಿ ನಡುವೆ ,ಸದನವನ್ನ ಅನಿರ್ದಿಷ್ಟವಾಧಿಗೆ ಸ್ಪೀಕರ್ ಮುಂದೂಡಿದ್ರು.
ರೈತಾಪಿ ವರ್ಗಕ್ಕೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ.. ರೈತರು ಮಧ್ಯಮ ಅವಧಿ, ದೀರ್ಘಾವಧಿ ಸಾಲ ಕಟ್ಟಿದರೆ, ಅದರ ಮೇಲಿನ ಬಡ್ಡಿ ಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ರು.. ಮೊನ್ನೆ ರೈತರ ಸಾಲ ಮನ್ನ ಮಾಡಲಿಲ್ಲ ಅಂದರೆ ರಾಜ್ಯಾದ್ಯಂತ ಹೋರಾಟ ಮಾಡುವೆ ಎಂದು ಗರ್ಜಿಸಿದ್ದ ರಾಜಾಹುಲಿಗೆ ಇಂದು ಸಾಲ ಮನ್ನಾ ಮಾಡುವ ಮೂಲಕ ಟಗರು ಟಕ್ಕರ್ ಕೊಡ್ತು..