ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಮುನ್ನವೇ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಲ್ಪಿಜಿ ಸಿಲಿಂಡರ್ (Cylinder) ಬೆಲೆ ಭಾರೀ ಇಳಿಕೆಯಾಗಿದೆ.
ತೈಲ ಕಂಪನಿಗಳು (Oil Marketing Companies) ವಾಣಿಜ್ಯ ಬಳಕೆಯ (Commercial LPG) 19 ಕೆಜಿ ಸಿಲಿಂಡರ್ ಬೆಲೆ 39.50 ರೂ. ಇಳಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.
ಪ್ರಸ್ತುತ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ಗೆ 1,757.50 ರೂ. ದರವಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್ ಬೆಲೆ ಸಾಧಾರಣವಾಗಿ ಪರಿಷ್ಕರಣೆಗೊಳ್ಳುತ್ತವೆ.
ಪ್ರಸ್ತುತ ದಿನ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 905.50 ರೂ. ಇದೆ. ಉಜ್ವಲ ಯೋಜನೆ ಹೊಂದಿದ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ಗೆ 300 ರೂ. ಸಬ್ಸಿಡಿ ಸಿಗುತ್ತಿದೆ. ಉಜ್ವಲ ಯೋಜನೆ ಅಡಿ ವರ್ಷಕ್ಕೆ ಒಟ್ಟು 12 ಸಿಲಿಂಡರ್ಗಳಿಗೆ ಈ ಸಬ್ಸಿಡಿ ಹಣ ನೀಡಲಾಗುತ್ತದೆ.