ಮಂಡ್ಯ :- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧವೇ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಎಂದು ಕರೆಯಲ್ಪಡುವ ವೆಂಕಟರಾಮೇಗೌಡ ಸೋಮವಾರ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಉಮೇದುವಾರಿಕೆಯಲ್ಲಿ ಸ್ಟಾರ್ ಚಂದ್ರು ಅವರು ತಮ್ಮ ಹಾಗೂ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿ ಮೌಲ್ಯಗಳ ಬಗ್ಗೆ ಘೋಷಣೆ ಮಾಡಿದ್ದಾರೆ.
ನಾಳೆ ಬೆಂಗಳೂರಿನಲ್ಲಿ IPL ಪಂದ್ಯ- ತವರಲ್ಲಿ ಗೆಲುವಿನ ನಗೆ ಬೀರಲಿದ್ಯಾ RCB!
ದೊಡ್ಡ ದೊಡ್ಡ ಮಟ್ಟದ ಕಾಮಗಾರಿಗಳನ್ನು ನಡೆಸುವ ಸ್ಟಾರ್ ಬಿಲ್ಡರ್ಸ್ ಎಂಬ ಕಂಪನಿಯ ಒಡೆತನ ಹೊಂದಿರುವ ವೆಂಕಟರಾಮೇಗೌಡ 410 ಕೋಟಿ ಒಡೆಯರಾಗಿದ್ದಾರೆ. ವೆಂಕಟರಾಮೇಗೌಡ ಅವರ ಹೆಸರಿನಲ್ಲಿ 237 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, ಪತ್ನಿ ಕುಸುಮ ಹೆಸರಲ್ಲಿ 146 ಕೋಟಿ ಮೌಲ್ಯದ ಆದಾಯ ಇರುವುದಾಗಿ ಘೋಷಿಸಿದ್ದಾರೆ.
ಸ್ಟಾರ್ ಚಂದ್ರುಗೆ 26 ಕೋಟಿ ಮೌಲ್ಯದ ಆಸ್ತಿ ಪಿತ್ರಾರ್ಜಿತವಾಗಿ (ಅವಿಭಕ್ತ ಕುಟುಂಬದ ಆಸ್ತಿ) ಬಂದಿದೆ. ಸದ್ಯ, ಇವರ ಬಳಿ 99.36 ಕೋಟಿ ರೂಪಾಯಿ ಚರಾಸ್ತಿ ಇದ್ದು, ಪತ್ನಿ ಕುಸುಮ ಹೆಸರಲ್ಲಿ 4.20 ಕೋಟಿ ಚರಾಸ್ತಿ ಇದೆ.
ಸ್ಟಾರ್ ಚಂದ್ರು ಬಳಿ ಕಾರಿಲ್ಲ
ಸ್ಟಾರ್ ಚಂದ್ರು ಇಷ್ಟೊಂದು ಶ್ರೀಮಂತರಾದರೂ ಅವರ ಬಳಿಯಲ್ಲಿ ಯಾವುದೇ ಕಾರುಗಳಿಲ್ಲ. ಮೂರು ಟ್ರ್ಯಾಕ್ಟರ್ಗಳನ್ನು ಮಾತ್ರ ಅವರು ಹೊಂದಿದ್ದಾರೆ.
ಪತಿ-ಪತ್ನಿ ಹೆಸರಲ್ಲಿ 9 ಮನೆಗಳು
ಇನ್ನು ತಮ್ಮ ಹೆಸರಲ್ಲಿ 80.72 ಕೋಟಿ ರೂ. ಮೌಲ್ಯದ 5 ವಾಣಿಜ್ಯ ಸಂಕೀರ್ಣ, ಪತ್ನಿ ಹೆಸರಲ್ಲಿ 36.39 ಕೋಟಿ ರೂ. ಮೌಲ್ಯದ 3 ವಾಣಿಜ್ಯ ಸಂಕೀರ್ಣ, ಪತಿ-ಪತ್ನಿ ಹೆಸರಲ್ಲಿ 9 ಮನೆಗಳಿವೆ.
ಸ್ಟಾರ್ ಚಂದ್ರು ಹೆಸರಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲ. 15 ಕೋಟಿ ರೂಪಾಯಿ ಸಾಲ ಮಾಡಿರುವ ಇವರು, ಉದ್ಯಮಿಯಾಗಿ ಕಾಲಕಾಲಕ್ಕೆ ತೆರಿಗೆ ಪಾವತಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಘೋಷಣೆ ಮಾಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ