2021ರಿಂದ ನಡೆಯುತ್ತಿರುವ ವಿಶೇಷ ಸ್ವಚ್ಛತಾ ಅಭಿಯಾನಗಳಲ್ಲಿ ಗುಜರಿಗಳನ್ನು ಮಾರಿ ಸರ್ಕಾರಕ್ಕೆ 2,364 ಕೋಟಿ ರೂ ಆದಾಯ ಸಿಕ್ಕಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಈ ಗುರಿ ವಿಲೇವಾರಿಯಿಂದಾಗಿ ಸರ್ಕಾರಿ ಕಚೇರಿಗಳೂ ಸ್ವಚ್ಛಗೊಂಡಿವೆ, ಸರ್ಕಾರಕ್ಕೂ ಆದಾಯ ಸಿಕ್ಕಂತಾಗಿದೆ
Maharashtra election: ಮಹಾ ವಿಕಾಸ್ ಅಘಾಡಿ ಜತೆ ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್!
ಅಕ್ಟೋಬರ್ 1ರಿಂದ 31ರವರೆಗೂ ಸರ್ಕಾರ ನಾಲ್ಕನೇ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಂಡಿತು. ಈ ಸಂದರ್ಭದಲ್ಲಿ ಗುಜರಿಗಳನ್ನು ಮಾರಿ ಸರ್ಕಾರಕ್ಕೆ ಸಿಕ್ಕ ಆದಾಯ 650 ಕೋಟಿ ರೂಗೂ ಅಧಿಕ ಎನ್ನಲಾಗಿದೆ. ಸಿಬ್ಬಂದಿ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ಪ್ರಕಾರ, 5.97 ಲಕ್ಷ ಸ್ಥಳಗಳಲ್ಲಿ (ಸರ್ಕಾರಿ ಕಚೇರಿ) ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿತ್ತು. ಸಾಕಷ್ಟು ಕಾಲದಿಂದ ಅನಗತ್ಯವಾಗಿ ಬಿದ್ದಿದ್ದ ಗುಜರಿಗಳನ್ನು ಮಾರಲಾಗಿದೆ. ಇದರಿಂದ ಸರ್ಕಾರಿ ಕಚೇರಿಗಳಲ್ಲಿನ 190 ಚದರಡಿಯ ಜಾಗ ಕ್ಲಿಯರ್ ಆದಂತಾಗಿದೆಯಂತೆ.
ವರ್ಷದಿಂದ ವರ್ಷಕ್ಕೆ ಸ್ವಚ್ಛತಾ ಅಭಿಯಾನದ ತೀವ್ರತೆ ಮತ್ತು ವ್ಯಾಪಕತೆ ಹೆಚ್ಚುತ್ತಿದೆ. 2023ರಲ್ಲಿ 2.59 ಲಕ್ಷ ಸ್ಥಳಗಳಲ್ಲಿ ಅಭಿಯಾನ ನಡೆದಿತ್ತು. 2024ರಲ್ಲಿ 5.97 ಲಕ್ಷ ಸೈಟ್ಗಳನ್ನು ಕವರ್ ಮಾಡಲಾಗಿದೆ. ಸ್ಪೆಷನ್ ಕೆಂಪೈನ್ 4.0 ಅನ್ನು ಗಮನಿಸಲೆಂದೇ ನಿರ್ದಿಷ್ಟ ಪೋರ್ಟಲ್ ಅನ್ನು ರೂಪಿಸಲಾಗಿದೆ. ದಿನ ನಿತ್ಯದ ಸ್ವಚ್ಛತಾ ಕಾರ್ಯಗಳ ವಿವರಗಳನ್ನು ಈ ಪೋರ್ಟಲ್ನಲ್ಲಿ ಹಾಕಲಾಗುತ್ತದೆ.
ಸ್ವಚ್ಛತಾ ಅಭಿಯಾನ 4.0 ಯಶಸ್ಸಿನ ಬಗ್ಗೆ ಎಕ್ಸ್ನಲ್ಲಿ ಸಚಿವ ಜಿತೇಂದ್ರ ಸಿಂಗ್ ಹಾಕಿದ ಪೋಸ್ಟ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಂಘಿಕ ಪ್ರಯತ್ನಗಳಿಂದ ಉತ್ತಮ ಫಲ ದೊರಕುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.