ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ತಾಲೂಕಿನ ಗುಂತಪನಹಳ್ಳಿ ಗ್ರಾಮದ ಬಳಿ ಪ್ರಿಯಕರನ ಜೊತೆಯಲ್ಲಿದ್ದ 8 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣ: ಪ್ರಮುಖ ಸಾಕ್ಷಿಗಳೇ ಕಳವು!
ಅನುಷಾ ಅನುಮಾನಾಸ್ಪದವಾಗಿ ಮೃತಪಟ್ಟ ಗರ್ಭಿಣಿ. ಪ್ರಿಯಕರ ಪವನ್, ವಿವಾಹಿತ ಪ್ರಿಯತಮೆ ಅನುಷಾ ಕೊಲ್ಲಲು ಪ್ರಯತ್ನಿಸಿದ್ದ. ಗರ್ಭಿಣಿ ಅನುಷಾಗೆ ಮೊದಲು ವಿಷ ಕುಡಿಸಿ ಕೊಲ್ಲಲು ಯತ್ನಿಸಿದ್ದ. ವಿಷ ಕುಡಿದರೂ ಸಹ ಅನುಷಾ ಬದುಕಿದ್ದಳು. ಆದ್ರೆ, ಇದೀಗ ಅನುಷಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವ್ಯಕ್ತಿಯೊಂದಿಗೆ 08 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಒಂದು ಹೆಣ್ಣು ಮಗು ಸಹ ಇತ್ತು. ಆದರೆ ಗಂಡನಿಗೆ ಪ್ಯಾರಾಲಿಸಿಸ್ ಆದ ನಂತರ ಗಂಡನನ್ನು ತೊರದು ತವರು ಮನೆಗೆ ಬಂದು ವಾಸವಾಗಿದ್ದಳು. ಆಗ ಕೂಲಿ ಮಾಡುತ್ತಿದ್ದ ಅನುಷಾಳಿಗೆ ಗುಂತಪನಹಳ್ಳಿ ಗ್ರಾಮದ ಪವನ್ ಪರಿಚಯವಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದು ಗರ್ಭಿಣಿ ಸಹ ಆಗಿದ್ದಾಳೆ. ಇದರಿಂದ ತನ್ನನ್ನ ಮದುವೆಯಾಗುವಂತೆ ಅನುಷಾ ಒತ್ತಾಯಿಸಿ ಪವನ್ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಬೇರೆ ಬೇರೆ ಜಾತಿ ಎರಡನೇ ಮದುವೆ ಅಂತ ಪವನ್ ಮನೆಯವರು ಇಬ್ಬರಿಗೂ ಬೈದು ಮನೆಗೆ ಕರೆದುಕೊಂಡಿಲ್ಲ.
15 ದಿನಗಳ ಹಿಂದೆ ಸಹ ಪವನ್ ಊಟದ ಜೊತೆ ಇಲಿ ಪಾಷಾಣ ತಿನ್ನಿಸಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಆಕೆ ಆರೋಪಿಸಿದ್ದಳು. ಪೊಲೀಸ್ ಠಾಣೆಗೆ ಪವನ್ ವಿರುದ್ಧ ದೂರು ನೀಡಿದ್ದಳು. ತದನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದು ಇಬ್ಬರು ಸಹ ಜೊತೆಯಾಗಿದ್ದರು. ಆದ್ರೆಮ ಕಳೆದ ರಾತ್ರಿ ಗುಂತಪನಹಳ್ಳಿ ಗ್ರಾಮದ ಬಳಿ ಹೊಂಗೆ ಮರದಡಿ ಮದ್ಯಪಾನ ಮಾಡಿ ಮಲಗಿದ್ದರಂತೆ. ಬೆಳಗ್ಗೆ ಎದ್ದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಾವಿನ ಸುತ್ತ ಸಾಕಷ್ಟು ಅನುಮಾನ ಎದ್ದಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಆದರೂ ಕೊಲೆ ಎಂದು ಶಂಕೆ ವ್ಯಕ್ತವಾಗಿದೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.