ಕೆ.ವಿ.ರಮಣರಾಜ್ ಅವರ ನಿರ್ದೇಶನದ, ನಟ ವಿಜಯ ರಾಘವೇಂದ್ರ ನಸಯಕನಾಗಿ ಅಭಿನಯಿಸಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ ‘ಎಫ್.ಐ.ಆರ್. 6 to 6’ ಇದೇ ತಿಂಗಳ 28ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ಪಟ್ಟಾಭಿಷೇಕೆಂಬ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯರಮೇಶ್ ಅವರ ನಿರ್ಮಾಣದ ಈ ಚಿತ್ರಕ್ಕೆ ಓಂಜಿ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಚಿತ್ರತಂಡ ಬಿಡುಗಡೆ ಸಿದ್ದತೆಗಳ ಕುರಿತಂತೆ ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ರಮಣರಾಜ್ ಮಾತನಾಡುತ್ತ ಇದೇ ಶುಕ್ರವಾರ ನಮ್ಮ ಚಿತ್ರ ಎಪ್.ಐ.ಆರ್. 6 to 6 ರಿಲೀಸಾಗುತ್ತಿದೆ. ಒಂದೇ ರಾತ್ರಿಯಲ್ಲಿ ನಡೆಯುವ ಆಕ್ಷನ್, ಥ್ರಿಲ್ಲಿಂಗ್ ಕಥೆಯಿದು. ಯುವಕನೊಬ್ಬ ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು ನಂತರ ಆ ಸಂದರ್ಭವನ್ನು ಹೇಗೆ ಫೇಸ್ ಮಾಡುತ್ತಾನೆ ಅನ್ನೋದನ್ನು ಸಂಜೆ ಆರರಿಂದ ಬೆಳಗಿನ ಜಾವ ಆರರವರೆಗೆ ನಡೆಯುವ ಕಥೆಯ ಮೂಲಕ ಥ್ರಿಲ್ಲಿಂಗ್ ಆಗಿ ಹೇಳಲು ಪ್ರಯತ್ನಿಸಿದ್ದೇವೆ. 35 ದಿನ ಪೂರ್ತಿ ರಾತ್ರಿ ವೇಳೆಯಲ್ಲೇ ಶೂಟ್ ಮಾಡಿದ್ದೇವೆ ಎಂದರು. ನಿರ್ಮಾಪಕಿ ಭಾಗ್ಯ ರಮೇಶ್ ಮಾತನಾಡುತ್ತ ಪಟ್ಟಾಭಿಷೇಕ ನಂತರ ನಮ್ಮ ಬ್ಯಾನರ್ ನ ಎರಡನೇ ಚಿತ್ರವಿದು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ನೋಡಿ ಹರಸಿ ಎಂದು ಕೇಳಿಕೊಂಡರು.
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡುತ್ತ ಈ ಚಿತ್ರದಲ್ಲಿ ನಾನು ೨ ಆಕ್ಷನ್ ಗಳನ್ನು ಕಂಪೋಜ್ ಮಾಡಿದ್ದು, ಎರಡನ್ನೂ ರಾತ್ರಿ ವೇಳೆಯಲ್ಲೇ ಮಾಡಿದ್ದೇವೆ. ರಾಘು ಅವರ ಡೆಡಿಕೇಶನ್, ಆಕ್ಷನ್ ತುಂಬಾ ಚೆನ್ನಾಗಿರುತ್ತದೆ.
ಯಶ್ ಶೆಟ್ಟಿ ಒಳ್ಳೆ ನಟ, ಇದು ಒಂದೊಳ್ಳೆ ಆಕ್ಷನ್ ಥ್ರಿಲ್ಲಿಂಗ್ ಚಿತ್ರ, ನಾಗೇಂದ್ರ ಅರಸ್, ಯಶ್ ಶೆಟ್ಟಿ ಎಲ್ರೂ ಒಳ್ಳೆ ರೋಲ್ ಮಾಡಿದ್ದಾರೆ ಎಂದರು.
ನಾಯಕ ವಿಜಯ ರಾಘವೇಂದ್ರ ಮಾತನಾಡುತ್ತರಮೇಶಣ್ಣ, ಕೇಶವ ಹಾಗೂ ರಮಣರಾಜ್ ಅವರಿಗೆ ಥ್ಯಾಂಕ್ಸ್ ಹೇಳಬೇಕು. ಚಿತ್ರದಲ್ಲಿ ಎಲ್ಲ ಪಾತ್ರಗಳು ಮುಖ್ಯವಾಗುತ್ತೆ. ಯಶ್ ತುಂಬಾ ಇನ್ ಟೆನ್ಸ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಚಿತ್ರಕ್ಕಾಗಿ ತುಂಬಾ ಎಫರ್ಟ್ ಹಾಕಿದ್ದಾರೆ. ಈ ಚಿತ್ರದಲ್ಲಿ ಮೇಜರ್ ಆಗಿರುವುದೇ ಆ್ಯಕ್ಷನ್. ಡೈರೆಕ್ಟರ್, ಡಿಓಪಿ, ಮ್ಯೂಸಿಕ್ ಎಲ್ಲರ ದೃಷ್ಟಿಕೋನ ಒಂದೇ ಆಗಿದ್ದರೆ ಸಿನಿಮಾ ಉತ್ತಮವಾಗಿ ಮೂಡಿಬರಲು ಸಹಕಾರಿಯಾಗುತ್ತದೆ ಎಂದರು.
ಚಿತ್ರದಲ್ಲಿ ಸಿರಿರಾಜ್, ಸ್ವಾತಿ, ಯಶಾ ಶೆಟ್ಟಿ ಹೀಗೆ ಮೂವರು ನಾಯಕಿಯರಿದ್ದಾರೆ.ನಿರ್ದೇಶಕ ರಮಣರಾಜ್ ಅವರು ಈ ಹಿಂದೆ ತೆಲುಗಿನ ಜೆಡಿ ಚಕ್ರವರ್ತಿ ಅವರ ಜೊತೆ ಒಂದು ಚಿತ್ರ ಮಾಡಿದ್ದಾರೆ. ಆ ಚಿತ್ರವಿನ್ನೂ ರಿಲೀಸಾಗಿಲ್ಲ. ಎಪ್.ಐ.ಆರ್. 6 to 6′ ಅವರ ನಿರ್ದೇಶನದ ಎರಡನೇ ಚಿತ್ರ. ಚಿತ್ರದ ಸಂಕಲನಕಾರ ನಾಗೇಂದ್ರ ಅರಸ್, ಸಂಗೀತ ನಿರ್ದೇಶಕ ಎಂ.ಎಸ್.ತ್ಯಾಗರಾಜ್ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು. ಸತೀಶ್ ಬಾಬು ಹಾಗೂ ಎಂ.ಎಸ್. ತ್ಯಾಗರಾಜ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.