ನವದೆಹಲಿ:- ಸಂಸದರ ಮನವಿ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡುವಂತೆ ಕೆಲ ಸಂಸದರು ಅವರಾಗಿಯೇ ಮನವಿ ಮಾಡಿದ್ದರು’ ಎಂದರು.
ಅಷ್ಟೊಂದು ಸಂಸದರನ್ನು ಅಮಾನತುಗೊಳಿಸುವ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ. ಆದರೆ ಅಶಿಸ್ತಿಗಾಗಿ ಕೆಲವು ಸಂಸದರನ್ನು ಅಮಾನತು ಮಾಡಿದಾಗ, ಆ ಪಕ್ಷಗಳ ಇತರ ಸದಸ್ಯರು ತಮ್ಮನ್ನೂ ಅಮಾನತು ಮಾಡುವಂತೆ ಮನವಿ ಮಾಡಿಕೊಂಡರು. ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕೂ ಇಳಿಯಲು ಸಿದ್ಧ’ ಎಂದು ಕಿಡಿಕಾರಿದರು.
‘ಭಿತ್ತಿಪತ್ರಗಳನ್ನು ತಂದು ಅಶಿಸ್ತು ತೋರುವವರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿತ್ತು. ಆದರೂ ಅಶಿಸ್ತು ತೋರಿದರು. ಅಮಾನತು ಆಗಬೇಕೆಂಬುದೇ ಅವರ ಉದ್ದೇಶವಾಗಿತ್ತು’ ಎಂದರು.
ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ 100 ಮತ್ತು ರಾಜ್ಯಸಭೆಯ 46 ಸಂಸದರು ಸೇರಿ ಒಟ್ಟು 146 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದರು.