ದೊಡ್ಡಬಳ್ಳಾಪುರ : ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ ಮಾಡಿ, ಅಂತ್ಯಕ್ರಿಯೆಗೆ ಯತ್ನಿಸಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೇರಳಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತ್ನಿಯ ಹತ್ಯೆಗೈದು ದೂರು ದಾಖಲಿಸಿದೆ ಅಂತ್ಯಕ್ರಿಯೆಗೆ ಯತ್ನಿಸಿದ್ದು, ಕೊನೆ ಕ್ಷಣದಲ್ಲಿ ಸಿನಿಮೀಯ ರೀತಿಯಲ್ಲಿ ಎಂಟ್ರಿಕೊಟ್ಟ ಪೊಲೀಸರು ಅಂತ್ಯಕ್ರಿಯೆ ನಿಲ್ಲಿಸಿದ್ದಾರೆ.
ಗ್ರಾಮದ ರಾಧಮ್ಮ ( 45 ) ಕೊಲೆಯಾದ ಪತ್ನಿ. ಸದ್ಯ ಪತ್ನಿಯ ಹತ್ಯೆ ಆರೋಪದಲ್ಲಿ ಪತಿ ಲಕ್ಷ್ಮಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ನಶೆಯಲ್ಲಿ ಗಲಾಟೆ ಮಾಡಿ ಪತ್ನಿಯ ತಲೆಯನ್ನ ಗೋಡೆಗೆ ಹೊಡೆದು ಸಾಯಿಸಿದ್ದು, ಕೊಲೆ ನಂತರ ಕುಟುಂಬಸ್ಥರೆಲ್ಲ ಸೇರಿ ಕೊಲೆ ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿ ಕೇಸ್ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಸಾಧಿಕ್ ಪಾಷ ಅವರು, ಮೃತದೇಹವನ್ನ ಶವಾಗಾರಕ್ಕೆ ರವಾನಿಸಿ ಪೊಲೀಸರಿಂದ ತನಿಖೆ ಆರಂಭಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.