ಹೈದರಾಬಾದ್: ಬಾಂಗ್ಲಾ ವಿರುದ್ಧ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಹಲವು ದಾಖಲೆಗಳನ್ನು ನುಚ್ಚುನೂರು ಮಾಡಿತು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್ 12) ನಡೆದ ಪಂದ್ಯವು ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಭಾರತದ ಬ್ಯಾಟರ್ಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ ಆದವು. ಮೊದಲ ಓವರ್ನಿಂದಲೇ ಅಬ್ಬರಿಸಲು ಶುರು ಮಾಡಿದ ಸಂಜು ಸ್ಯಾಮ್ಸನ್ ಸಿಕ್ಸರ್,
ಬೌಂಡರಿಗಳೊಂದಿಗೆ ಶತಕ ಸಿಡಿಸಿ ಮೆರೆದಾಡಿದರು. ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯ ಕುಮಾರ್ ಯಾದವ್, ಹೆಡ್ ಕೋಚ್ ಗೌತಮ್ ಗಂಭೀರ್ ನೀಡಿದ ಸಲಹೆ ಬಹಿರಂಗಪಡಿಸಿದ್ದಾರೆ. ನಾವು ತಂಡವಾಗಿ ಈಗಾಗಲೇ ಸಾಕಷ್ಟು ಸಾಧಿಸಿದ್ದೇವೆ ಎಂಬುದು ನಮಗೆ ಗೊತ್ತು. ನನಗೆ ನಿಸ್ವಾರ್ಥ ತಂಡ ಹಾಗೂ ಆಟಗಾರರು ಬೇಕಾಗಿದ್ದಾರೆ. ತಂಡದ ಪ್ರತಿಯೊಬ್ಬರ ಪ್ರದರ್ಶನವನ್ನು ಆನಂದಿಸಿ ಆಗ ಪರಸ್ಪರರಲ್ಲಿ ಸೌಹಾರ್ದತೆ ಮೂಡುತ್ತದೆ.
Health Care: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಮತ್ತು ಪಾನೀಯವನ್ನು ಮುಟ್ಟಲೇಬೇಡಿ!
ಅಲ್ಲದೆ ಸರಣಿ ಆರಂಭಕ್ಕೂ ಮುನ್ನ ಗೌತಿ ಭಾಯ್ ಮತ್ತೊಂದು ದೊಡ್ಡ ಸಲಹೆ ನೀಡಿದ್ದರು. ಅದೇನೆಂದರೆ ತಂಡಕ್ಕಿಂತ ಯಾವುದೇ ಆಟಗಾರ ದೊಡ್ಡವರಲ್ಲ, ನೀವು 49 ಅಥವಾ 99 ರನ್ ಗಳಿಸಿ ಆಡುತ್ತಿದ್ದೀರಾ ಎಂಬುವುದರ ಕುರಿತು ಯೋಚಿಸದೆ, ಚೆಂಡನ್ನು ಬೌಂಡರಿ ಆಚೆಗಟ್ಟಲು ಪ್ರಯತ್ನಿಸಿ. ಅದೇ ಕೆಲಸವನ್ನು ಸಂಜು ಇಂದು ನಿಭಾಯಿಸಿದ್ದಾರೆ,” ಎಂದು ಸೂರ್ಯ ಕುಮಾರ್ ಯಾದವ್ ಹೇಳಿದರು.
ಟಿ20-ಐ ಕ್ರಿಕೆಟ್ ನಲ್ಲಿ ಭಾರತದ ಪರ ಅತಿ ವೇಗದ 2500 ರನ್ ಪೂರೈಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಸಂಜು ಸ್ಯಾಮ್ಸನ್ ಪಾತ್ರರಾದರು. ಈ ರೀತಿ ಸ್ಥಿರ ಪ್ರದರ್ಶನ ನೀಡಿದರೆ ತಂಡದ ಲೈನ್ ಅಪ್ ಬಲಿಷ್ಠವಾಗುತ್ತದೆ ಎಂದು ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.