ಮುಂಬೈ: ಇದೇ ಜುಲೈ 27ರಿಂದ ಶ್ರೀಲಂಕಾ (Sri Lanka) ವಿರುದ್ಧ ನಡೆಯಲಿರುವ ದ್ವಿಪಕ್ಷೀಯ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸವು ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿ, ಮೂರು ಪಂದ್ಯಗಳ ಏಕದಿನ ಸರಣಿಯೂ ಆಯೋಜನೆಗೊಂಡಿದೆ.
ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್, ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಸಿದ್ದಾರೆ. ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ಸೂರ್ಯಕುಮಾರ್ ಯಾದವ್ಗೆ ಬಿಸಿಸಿಐ ಪಟ್ಟಕಟ್ಟಿದೆ
ವೈಟ್ಬಾಲ್ಗೆ ಸಂಪೂರ್ಣ ಗುಡ್ ಬೈ ಹೇಳ್ತಾರಾ ಕೊಹ್ಲಿ..? ಜಸ್ಟ್ ಏಳೇ ಏಳು ತಿಂಗಳಲ್ಲಿ ಉತ್ತರ
ಮುಂಬರುವ ಪ್ರವಾಸವು ನೂತನ ಮುಖ್ಯಕೋಚ್ ಕೋಚ್ ಗೌತಮ್ ಗಂಭೀರ್ ಅವರಿಗೆ ಮೊದಲ ಸವಾಲಾಗಿದೆ. ಈ ಸರಣಿಯೊಂದಿಗೆ ತಮ್ಮ ತರಬೇತಿಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಟಿ20 ತಂಡಕ್ಕೆ ಶುಭಮನ್ ಗಿಲ್ ಉಪನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಸರಣಿಗೆ ಲಭ್ಯರಾಗಿದ್ದಾರೆ. ಇದರೊಂದಿಗೆ ವಾಷಿಂಗ್ಟನ್ ಸುಂದರ್, ಖಲೀಲ್ ಅಹ್ಮದ್ ಸೇರಿದಂತೆ ಅನೇಕ ಯುವ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಏಕದಿನ ಸರಣಿಯಲ್ಲಿ ಕೆ.ಎಲ್ ರಾಹುಲ್ ಸೇರಿದಂತೆ ರಿಷಭ್ ಪಂತ್ ಜೊತೆಗೆ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ.
ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಮರಳಿದ್ದಾರೆ. ಕೆ.ಎಲ್ ರಾಹುಲ್ ಇಲ್ಲಿ ವಿಕೆಟ್ ಕೀಪರ್ ಕೋಟಾದಲ್ಲಿ ಅವಕಾಶ ಪಡೆದಿದ್ದಾರೆ. ವಾಷಿಂಗ್ಟನ್ ಸುಂದರ್, ಖಲೀಲ್ ಅಹಮದ್ , ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಅವಕಾಶ ಪಡೆದಿದ್ದಾರೆ. ರಿಯಾನ್ ಪರಾಗ್ ಏಕದಿನ ಮಾದರಿಯಲ್ಲಿ ತಂಡ ಸೇರಿದ್ದಾರೆ. ಎರಡೂ ತಂಡಗಳಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿದ್ದಾರೆ.