ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಗೌರವ ಗೆದ್ದ ಆಟಗಾರ ಎಂಬ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿತ್ತು. ಇದೀಗ ಈ ದಾಖಲೆಯನ್ನು ಭಾರತ ಟಿ20 ಕ್ರಿಕೆಟ್ ತಂಡದ ನೂತನ ನಾಯಕ ಸೂರ್ಯಕುಮಾರ್ ಯಾದವ್ ತಮ್ಮದಾಗಿಸಿಕೊಂಡಿದ್ದಾರೆ.
ಭಾರತಕ್ಕಾಗಿ ಮೊದಲ ಪದಕ ತಂದುಕೊಟ್ಟ ಮಹಿಳಾ ಶೂಟರ್: ಪ್ರಧಾನಿ ಮೋದಿ ಶ್ಲಾಘನೆ!
ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಟ್ರೋಫಿ ಗೆದ್ದುಕೊಟ್ಟ ಬಳಿಕ ವಿರಾಟ್ ಕೊಹ್ಲಿ ತಮ್ಮ ಟಿ20-ಐ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದರು. ಹೀಗಾಗಿ ಟಿ20-ಐನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಗೌರವಗಳ ವಿಶ್ವ ದಾಖಲೆಯನ್ನು ಕಿಂಗ್ ಕೊಹ್ಲಿ ಮರಳಿ ಸಂಪಾದಿಸಲು ಸಾಧ್ಯವಿಲ್ಲವಾಗಿದೆ.
ವಿರಾಟ್ ಕೊಹ್ಲಿ ಆಡಿದ 125 ಟಿ20-ಐ ಪಂದ್ಯಗಳಲ್ಲಿ 16 ಬಾರಿ ಪಂದ್ಯಶ್ರೇಷ್ಠ ಗೌರವ ಪಡೆದಿದ್ದಾರೆ. ಆದರೆ, 32 ವರ್ಷದ ಸ್ಟೈಲಿಷ್ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೇವಲ 69 ಪಂದ್ಯಗಳಲ್ಲಿ 16 ಪಂದ್ಯಶ್ರೇಷ್ಠ ಗೌರವ ಪಡೆದು ಅತಿ ವೇಗವಾಗಿ ಈ ಸಾಧನೆ ಮೆರೆದ ವಿಶ್ವ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ಟಿ20-ಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರು
01. ಸೂರ್ಯಕುಮಾರ್ ಯಾದವ್ (ಭಾರತ) – 16 (69 ಪಂದ್ಯಗಳು)
02. ವಿರಾಟ್ ಕೊಹ್ಲಿ (ಭಾರತ) – 16 (125 ಪಂದ್ಯಗಳು)
03. ಸಿಕಂದರ್ ರಾಜಾ (ಜಿಂಬಾಬ್ವೆ) – 15 (91 ಪಂದ್ಯಗಳು)
04. ಮೊಹಮ್ಮದ್ ನಬಿ (ಅಫಘಾನಿಸ್ತಾನ) – 14 (129 ಪಂದ್ಯಗಳು)
05. ರೋಹಿತ್ ಶರ್ಮಾ (ಭಾರತ) – 14 (159 ಪಂದ್ಯಗಳು)
06. ವೀರನ್ದೀಪ್ ಸಿಂಗ್ (ಮಲೇಷ್ಯಾ) 14 (78 ಪಂದ್ಯಗಳು)