ಬಾಕ್ಸ್ ಆಫೀಸಿನಲ್ಲಿ ಅನಿಮಲ್ (Animal) ಸಿನಿಮಾ ಕೋಟಿ ಕೋಟಿ ಬಾಚುತ್ತಿದ್ದಂತೆಯೇ ರಶ್ಮಿಕಾ (Rashmika Mandanna) ಖದರ್ ಬದಲಾಗಿ ಬಿಟ್ಟಿದೆ. ರಶ್ಮಿಕಾ ಮತ್ತು ರಣಬೀರ್ ಕಪೂರ್ ಜೋಡಿಯ ಕುರಿತಂತೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಈ ಹೊಗಳಿಕೆಯ ಬೆನ್ನಲ್ಲೇ ಪುಷ್ಪ 2 ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪುಷ್ಪ 2 ಸಿನಿಮಾದ ಸ್ಟೋರಿಯಲ್ಲಿ ರಶ್ಮಿಕಾಗೆ ಕಡಿಮೆ ದೃಶ್ಯಗಳು ಇದ್ದವಂತೆ. ಅವುಗಳನ್ನು ಈಗ ಹೆಚ್ಚಿಸಲಾಗಿದೆ ಎನ್ನುವುದು ಲೆಟೆಸ್ಟ್ ಸಮಾಚಾರ.
ಇದರ ಜೊತೆಗೆ ಪುಷ್ಪ ಸಿನಿಮಾದ ‘ವೂಂ ಅಂಟಾವ ಮಾವ..’ ಹಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಹಾಡೇ ಪಷ್ಪ ಸಿನಿಮಾಗೆ ಜನರನ್ನೂ ಕರೆತಂದಿದ್ದು. ಸೋಷಿಯಲ್ ಮೀಡಿಯಾದಲ್ಲಂತೂ ಕೋಟ್ಯಂತರ ಜನರು ರೀಲ್ಸ್ ಮಾಡಿದ್ದರು. ಈ ಹಾಡಿಗೆ ಸಮಂತಾ (Samantha) ಸಖತ್ತಾಗಿಯೇ ಸೊಂಟ ಬಳುಕಿಸಿದ್ದರು. ಈ ಯಶಸ್ಸನ್ನು ಮತ್ತೊಂದು ಬಾರಿ ಬಳಸಿಕೊಳ್ಳಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಪುಷ್ಪ 2 ಸಿನಿಮಾದಲ್ಲೂ ಐಟಂ ಸಾಂಗ್ (Item Song) ವೊಂದಿದ್ದು, ಅದಕ್ಕೆ ಸಮಂತಾ ಅವರೇ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಡಾನ್ಸ್ ಮಾಸ್ಟರ್ ಮತ್ತು ನಿರ್ದೇಶಕರು ಸಮಂತಾ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಸಮಂತಾ ಕೂಡ ಆ ಹಾಡಿನಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರು ಮಾಡಲಿದ್ದಾರಂತೆ ಸಮಂತ.ರ್ದೇಶಕ ಸುಕುಮಾರ್- ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಸೀಕ್ವೆಲ್ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಹೊರಟಿದೆ. ಪುಷ್ಪ 2 (Pushpa 2) ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ.