ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯ (Shivaram Karanth Layout) ನಿವೇಶನ ಹಂಚಿಕೆ ಕುರಿತು ಮಾಜಿ ಸಚಿವ ಸುರೇಶ್ ಕುಮಾರ್ (Suresh Kumar) ಡಿಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಪತ್ರ ಬರೆದಿದ್ದಾರೆ. ಮೊದಲು ಹಲವು ಬಿಡಿಎ (BDA) ಬಡಾವಣೆಗಳ ಹಂಚಿಕೆದಾದರ ಕುಂದುಕೊರತೆಗಳನ್ನು ಸರಿಪಡಿಸುವಂತೆ ಡಿಸಿಎಂ ಡಿಕೆಶಿವಕುಮಾರ್ಗೆ ಆಗ್ರಹ ಮಾಡಿದ್ದಾರೆ.
ವಯನಾಡಿನಲ್ಲಿ ಮೈಸೂರು ಮೂಲದ ಸಂತ್ರಸ್ತೆ ಕಣ್ಣೀರು: ನೆರವಿನ ಭರವಸೆ ಕೊಟ್ಟ ಸಿಎಂ
ಬನಶಂಕರಿ ಆರನೇ ಹಂತ ಬಡಾವಣೆಯಲ್ಲಿ, ಬಿಡಿಎ ಅರಣ್ಯ ಪ್ರದೇಶದಲ್ಲಿ (ತುರಹಳ್ಳಿ ಅರಣ್ಯ ಪ್ರದೇಶ) ಮತ್ತು ಅರಣ್ಯ ಬಫರ್ ವಲಯದಲ್ಲಿ 2003 – 2004 ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರ ಫಲವಾಗಿ ಇಂದು 1500 ಕ್ಕೂ ಹೆಚ್ಚು ನಿವೇಶನಗಳ ಮಾಲೀಕರು ತಮ್ಮ ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿರುವುದಿಲ್ಲ.
20 ವರ್ಷ ಕಳೆದು ಹೋಗಿದ್ದರೂ ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಒಟ್ಟಿಗೆ ಕುಳಿತು ಚರ್ಚಿಸಿ ಪ್ರಸ್ತುತ ಭೂಮಿಯ ಮಾಲೀಕತ್ವದ ಬಗ್ಗೆ ಒಂದು ಒಪ್ಪಂದಕ್ಕೆ ಬರಲು ಸಾಧ್ಯವಾಗದೇ ಇರುವುದು ನಿಜಕ್ಕೂ ವಿಷಾದನೀಯ. ಬಿಡಿಎಯಿಂದ ನಿವೇಶನ ಪಡೆದು 20 ವರ್ಷಗಳು ಆದರೂ ತಮ್ಮ ನಿವೇಶನದಲ್ಲಿ ಒಂದು ಗೂಡು ಕಟ್ಟಿಕೊಳ್ಳುವ ಈ ಎಲ್ಲಾ ಸಂತ್ರಸ್ತ ಹಂಚಿಕೆದಾರರ ಆಸೆಗೆ ಕಣ್ಣೀರು ಎರಚುವಂತೆ ಮಾಡಿದೆ ಬಿಡಿಎ ಉದಾಸೀನ – ಬೇಜಾವ್ದಾರಿ ಮನಸ್ಥಿತಿ