ನವದೆಹಲಿ:- ಪಾಕಿಸ್ತಾನದಿಂದ ರಾಹುಲ್ ಗಾಂಧಿ, ಕೇಜ್ರಿವಾಲ್ಗೆ ಬೆಂಬಲ ವಿಚಾರವಾಗಿ PM ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
I love u ಎಂದು ಹಿಂದೂ ಮಹಿಳೆಗೆ ಟೆಕ್ಸ್ಟ್ ಮಾಡಿದ್ದ ಮುಸ್ಲಿಂ ಯುವಕನಿಗೆ ಚಪ್ಪಲಿ ಏಟು..!
ಈ ಸಂಬಂಧ ಮಾತನಾಡಿದ ಅವರು,ನಾನು ಇರುವ ಸ್ಥಾನದಿಂದ ಅಂತಹ ವಿಷಯಗಳ ಬಗ್ಗೆ ನಾನು ಮಾತನಾಡಬೇಕೆಂದು ನಾನು ಭಾವಿಸುವುದಿಲ್ಲ, ಆದರೆ ನಿಮ್ಮ ಕಾಳಜಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದಿದ್ದಾರೆ. ನನ್ನೊಂದಿಗೆ ದ್ವೇಷ ಹೊಂದಿರುವ ಕೆಲವೇ ಜನರನ್ನು ಪಾಕಿಸ್ತಾನದವರು ಏಕೆ ಇಷ್ಟಪಡುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಮೋದಿ ಹೇಳಿದ್ದಾರೆ.
ಪಾಕ್ ಬೆಂಬಲ ಕಳವಳಕಾರಿ ಸಂಗತಿ ಎಂದು ಒಪ್ಪಿಕೊಂಡ ಮೋದಿ ಅವರು, ಭಾರತೀಯ ಮತದಾರರು ಪ್ರಬುದ್ಧರಾಗಿದ್ದಾರೆ. ಗಡಿಯಾಚೆಗಿನ ಹೇಳಿಕೆಗಳು ಭಾರತದಲ್ಲಿನ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು. ಭಾರತದ ಚುನಾವಣೆ ಮತ್ತು ಭಾರತದ ಪ್ರಜಾಪ್ರಭುತ್ವವು ಬಹಳ ಪ್ರಬುದ್ಧವಾಗಿದೆ, ಆರೋಗ್ಯಕರ ಸಂಪ್ರದಾಯಗಳನ್ನು ಹೊಂದಿದೆ. ಭಾರತದ ಮತದಾರರು ಯಾವುದೇ ಹೊರಗಿನ ಚಟುವಟಿಕೆಗಳಿಂದ ಪ್ರಭಾವಿತರಾಗಿ ವೋಟ್ ಮಾಡಲ್ಲ ಎಂದರು.
ಮೊನ್ನೆ ತಮ್ಮ ಕುಟುಂಬ ವೋಟ್ ಮಾಡಿದ್ದಾಗಿ ಕೇಜ್ರಿವಾಲ್ ಅವರು ಫೋಟೋವನ್ನು ಪೋಸ್ಟ್ ಮಾಡಿದ್ದರು. ನಾನು ನನ್ನ ತಂದೆ, ಹೆಂಡತಿ ಮತ್ತು ಮಕ್ಕಳೊಂದಿಗೆ ಮತ ಚಲಾಯಿಸಿದ್ದೇನೆ. ನಾನು ಸರ್ವಾಧಿಕಾರ, ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಮತ ಹಾಕಿದ್ದೇನೆ. ನೀವೂ ಹೋಗಿ ಮತ ಹಾಕಿ ಎಂದು ಕೇಜ್ರಿವಾಲ್ ಕರೆ ನೀಡಿದ್ದರು. ಕೇಜ್ರಿವಾಲ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ಪಾಕ್ ಮಾಜಿ ಸಚಿವ ಫವಾದ್ ಹುಸೇನ್, ಶಾಂತಿ ಮತ್ತು ಸಾಮರಸ್ಯವು ದ್ವೇಷ ಮತ್ತು ಉಗ್ರವಾದದ ಶಕ್ತಿಗಳನ್ನು ಸೋಲಿಸಲಿ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಕೇಜ್ರಿವಾಲ್ ತಿರುಗೇಟು ನೀಡಿದರು.