ಚಾಮರಾಜನಗರ:- ದೆಹಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ ಕೊಳ್ಳೇಗಾಲದಲ್ಲಿ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಕರ್ತರು ಶನಿವಾರ ರಾತ್ರಿ 7ರಲ್ಲಿ ಮೇಣದಬತ್ತಿ ಹಿಡಿದು ಪ್ರತಿಭಟಿಸಿದರು.
ಅಕ್ರಮ ವಾಣಿಜ್ಯ ಮಳಿಗೆ ನಿರ್ಮಾಣ: ಅಧಿಕಾರಿಗಳಿಂದ ಬೆಳ್ಳಂ ಬೆಳಗ್ಗೆ ತೆರವು!
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ರಾಜಕುಮಾರ್ ರಸ್ತೆ ಸೇರಿ ಮುಖ್ಯರಸ್ತೆಗಳಲ್ಲಿ
ರೈತರು ಮೇಣದಬತ್ತಿ ಹಿಡಿದು
ಸಂಚರಿಸಿ ಡಾ.ಬಿಆರ್ ಅಂಬೇಡ್ಕರ್ ವೃತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಮಾದೇಶ್ ಮಾತನಾಡಿ, ದೆಹಲಿಯಲ್ಲಿ
ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಕೂಡಲೇ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು, ಕನಿಷ್ಠ ಬೆಂಬಲ, ರೈತರಿಗೆ ಪಿಂಚಣಿ ಮತ್ತು ಕೃಷಿ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ವಿನಾಯತ್, ಖಜಾಂಚಿ ಮಾದೇಶ್, ಕಾರ್ಯದರ್ಶಿ ವೆಂಕಟೇಶ್, ಬಸವಶೆಟ್ಟಿ, ಶಿವು, ಕಿರಣ್, ಸಿದ್ದರಾಜು,ಬಲರಾಮ, ಶ್ರೀಕಂಠ, ಕೊಂಗರಹಳ್ಳಿ ಮಾದೇಶ, ಆಲಮನೆ ರಾಜಣ್ಣ,ರಾಚಪ್ಪಾಜಿ,ಚಂದನ್,ನಾಗರಾಜು,ಹರೀಶ್ ಇದ್ರು.