ಮಾಜಿ ನೀಲಿ ಸಿನಿಮಾಗಳ ತಾರೆ ಸನ್ನಿ ಲಿಯೋನ್ (Sunny Leone), ಈಗಾಗಲೇ ಅನೇಕ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ.
ಪಾರ್ನ್ ಪ್ರಪಂಚದಿಂದ ದೂರವಾದ ನಂತರ ಅವರು ತಮ್ಮದೇ ಆದ ಸಾಕಷ್ಟು ಬ್ರ್ಯಾಂಡ್ ಗಳನ್ನು ಹೊಂದಿದ್ದಾರೆ.
ಇದೀಗ ಮತ್ತೊಂದು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದು, ಆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರೆಸ್ಟೋರೆಂಟ್ (Restaurant) ಶುರು ಮಾಡಬೇಕು ಎನ್ನುವುದು ಸನ್ನಿ ಆಸೆಯಿತ್ತಂತೆ. ಅದನ್ನು ಈಗ ಈಡೇರಸಿಕೊಂಡಿದ್ದಾರೆ.
ಪತಿಯ ಜೊತೆಗೂಡಿ ದೆಹಲಿಯ ನೋಯ್ಡಾದಲ್ಲಿ ರೆಸ್ಟೊರೆಂಟ್ ಶುರು ಮಾಡಿದ್ದು, ಅದಕ್ಕೆ ಚಿಕಲೋಕ ಎಂದು ಹೆಸರಿಟ್ಟಿದ್ದಾರೆ.
ರೆಸ್ಟೋರೆಂಟ್ ವಿಡಿಯೋವನ್ನು ಸನ್ನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು,

ಟಿವಿ ಕಲಾವಿದರು, ಸಿನಿಮಾ ಜಗತ್ತಿನಲ್ಲಿ ಇರೋರು, ಒಂದೇ ಕೆಲಸಕ್ಕೆ ಸೀಮಿತವಾಗಬೇಡಿ ಎಂದು ಸಲಹೆಯನ್ನೂ ನೀಡಿದ್ದಾರೆ.

ನಮ್ಮನ್ನು ನಾವು ವಿಸ್ತರಿಸಿಕೊಳ್ಳುತ್ತಾ ಹೋಗಬೇಕು ಎಂದು ಸನ್ನಿ ಹೇಳಿದ್ದಾರೆ.