ಯಾವಾಗಲೂ ಚಿಕನ್ ತಂದು ಒಂದೇ ರೀತಿ ಗ್ರೇವಿ ಮಾಡಿ ಬೇಜಾರಾಗಿದ್ದರೆ, ಮಾವಿನ ಕಾಯಿ ಹಾಕಿ ಚಿಕನ್ ಗ್ರೇವಿ ಟ್ರೈ ಮಾಡಿ. ಮಾವಿನಕಾಯಿ ಚಿಕನ್ ಗ್ರೇವಿ ಮಾಡುವುದು ಹೇಗೆಂದು ನೋಡೋಣ.
ದುಡ್ಡು ಕೊಟ್ಟು ಪೊರಕೆಯಲ್ಲಿ ಏಟು ತಿನ್ನಲು ತಾ ಮುಂದು ನಾ ಮುಂದು ಎಂದ ಭಕ್ತರು!
ಮಾವಿನಕಾಯಿ ಚಿಕನ್ ಗ್ರೇವಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಚಿಕನ್ – ಅರ್ಧ ಕೆ.ಜಿ
ಹುಳಿ ಮಾವಿನಕಾಯಿ – ಕಾಲು ಕಪ್
ದನಿಯಾ – 1 ಟೀ ಸ್ಪೂನ್
ಲವಂಗ – 3
ಚಕ್ಕೆ – ಅರ್ಧ ಇಂಚು
ಏಲಕ್ಕಿ – 3
ಒಣಮೆಣಸಿನಕಾಯಿ – 4
ಕರಿಮೆಣಸು – ಕಾಲು ಟೀ ಸ್ಪೂನ್
ಜೀರಿಗೆ – ಅರ್ಧ ಟೀ ಸ್ಪೂನ್
ಗೋಡಂಬಿ – 7-8
ಬೆಳ್ಳುಳ್ಳಿ – 8 ಎಸಳು
ಶುಂಠಿ – ಅರ್ಧ ಇಂಚು
ಹಸಿಮೆಣಸಿನಕಾಯಿ – 4
ಎಣ್ಣೆ – 6 ಟೀ ಸ್ಪೂನ್
ಈರುಳ್ಳಿ – 2
ಉಪ್ಪು – ರುಚಿಗೆ ತಕ್ಕಷ್ಟು
ಅಚ್ಚಖಾರದಪುಡಿ – ಅರ್ಧ ಟೀ ಸ್ಪೂನ್
ಅರಿಶಿಣಪುಡಿ – ಅರ್ಧ ಟೀ ಸ್ಪೂನ್
ಕೊತ್ತಂಬರಿಸೊಪ್ಪು – ಸ್ವಲ್ಪ
ಮೊದಲಿಗೆ ಸ್ಟೌವ್ ಮೇಲೆ ಒಂದು ಬಾಣಲಿ ಇಟ್ಟು ಅದಕ್ಕೆ 1 ಟೀ ಸ್ಪೂನ್ ದನಿಯಾ, 3 ಲವಂಗ, ಕಾಲು ಟೀ ಸ್ಪೂನ್ ಕರಿಮೆಣಸು, ಅರ್ಧ ಟೀ ಸ್ಪೂನ್ ಜೀರಿಗೆ, ಅರ್ಧ ಇಂಚು ಚಕ್ಕೆ, ಏಲಕ್ಕಿ 3, 4 ಒಣಮೆಣಸಿನಕಾಯಿ ಹಾಕಿ ಲೋ ಫ್ಲೇಮ್ ನಲ್ಲಿ ಡ್ರೈ ರೋಸ್ಟ್ ಮಾಡಬೇಕು. ಇದು ಸ್ವಲ್ಪ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಬೇಕು. ನೆನೆಸಿಟ್ಟು 7-8 ಗೋಡಂಬಿ (10 ನಿಮಿಷ ಗೋಡಂಬಿ ನೆನೆಸಿಟ್ಟುಕೊಳ್ಳಬೇಕು), ನೀರು ಸ್ವಲ್ಪ ಹಾಕಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್ ಬೌಲ್ ನಲ್ಲಿ ಹಾಕಿಕೊಳ್ಳಬೇಕು.
ಮಿಕ್ಸಿ ಜಾರಿಗೆ 8 ಬೆಳ್ಳುಳ್ಳಿ ಎಸಳು, ಅರ್ಧ ಇಂಚು ಶುಂಠಿ, 3-4 ಹಸಿಮೆಣಸಿನಕಾಯಿ ಹಾಕಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಬೇಕು.
ಸ್ಟೌವ್ ಮೇಲೆ ಒಂದು ಪ್ಯಾನ್ ಇಟ್ಟು ಇದಕ್ಕೆ 6 ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಕಾದ ಬಳಿಕ 1 ಕಪ್ ಸಣ್ಣದಾಗಿ ಹಚ್ಚಿರುವ ಈರುಳ್ಳಿಯನ್ನು ಹಾಕಿ, ಸ್ವಲ್ಪ ಉಪ್ಪು ಸೇರಿಸಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಬೇಕು.
ನಂತರ ಸ್ವಲ್ಪ ಕರಿಬೇವು ಹಾಕಿ ಈರುಳ್ಳಿ ಗೋಲ್ಡನ್ ಕಲರ್ ಬರುವವರೆಗೂ ಫ್ರೈ ಮಾಡಿ ಹಸಿಮೆಣಸಿನಕಾಯಿ-ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಬೇಕು. ನಂತರ ಇದಕ್ಕೆ ಚೆನ್ನಾಗಿ ತೊಳೆದಿರುವ ಅರ್ಧ ಕೆ.ಜಿ ಚಿಕನ್ ಹಾಕಿ ಮೀಡಿಯಂ ಫ್ಲೇಮ್ ನಲ್ಲಿ ಬೇಯಿಸಿಕೊಳ್ಳಬೇಕು.
5 ನಿಮಿಷದ ನಂತರ ಅರ್ಧ ಟೀ ಸ್ಪೂನ್ ಅಚ್ಚಖಾರದಪುಡಿ, ಅರ್ಧ ಟೀ ಸ್ಪೂನ್ ಅರಿಶಿಣಪುಡಿ, 3 ಟೀ ಸ್ಪೂನ್ ನೀರು ಹಾಕಿ ಚೆನ್ನಾಗಿ ಖಾರ ಹಿಡಿಯುವವರೆಗೂ ಬೇಯಿಸಿಕೊಳ್ಳಬೇಕು. ನಂತರ ಚಿಕನ್ ಗೆ ಗೋಡಂಬಿ-ಮಸಾಲೆ ಪೇಸ್ಟ್ ಹಾಕಬೇಕು. ಇದಕ್ಕೆ ಒಂದೂವರೆ ಕಪ್ ಬಿಸಿ ನೀರು ಹಾಕಿ ತಟ್ಟೆ ಮುಚ್ಚಿ ಕೆಲ ಕಾಲ ಬೇಯಿಸಿಕೊಳ್ಳಬೇಕು.
ಚಿಕನ್ ಚೆನ್ನಾಗಿ ಬೆಂದ ಮೇಲೆ ಕಾಲು ಕಪ್ ಸಣ್ಣದಾಗಿ ಕಟ್ ಮಾಡಿರುವ ಹುಳಿ ಮಾವಿನಕಾಯಿ, ಅರ್ಧ ಟೀ ಸ್ಪೂನ್ ಗರಂ ಮಸಾಲ ಹಾಕಿ ಮತ್ತೆ ಬೇಯಿಸಿಕೊಳ್ಳಬೇಕು. ಮಾವಿನಕಾಯಿ ಮೆತ್ತಗೆ ಆಗುವವರೆಗೂ ಬೇಯಿಸಿ, ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿ ಸ್ಟೌವ್ ಆಫ್ ಮಾಡಿದರೆ ಮಾವಿನಕಾಯಿ ಚಿಕನ್ ಗ್ರೇವಿ ತಿನ್ನುವುದಕ್ಕೆ ರೆಡಿ ಆಗುವುದು.