ಮಂಡ್ಯ:- ವಾಲ್ಮೀಕಿ, ಹಾಗೂ ಮುಡಾ ಹಗರಣಗಳಿಂದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ಜೆಡಿಎಸ್ ಪಾದಯಾತ್ರೆ ಜಿಲ್ಲೆಯಲ್ಲಿ 2ನೇ ದಿನ ನಡೆಯುತ್ತಿದ್ದರೂ ಸುಮಲತಾ ಮಾತ್ರ ದೂರ ಉಳಿದಿದ್ದಾರೆ.
Bengaluru: ನೆರೆಯ ಆಂಧ್ರದಲ್ಲೂ ಕಾಡುಪ್ರಾಣಿ- ಮಾನವ ಸಂಘರ್ಷ: ನಿಯಂತ್ರಣಕ್ಕೆ ಮುಂದಾದ ಸರ್ಕಾರ!
ಮುಡಾದಲ್ಲಿ ಸೈಟ್ ಹಗರಣ ಖಂಡಿಸಿ ಬಿಜೆಪಿ, ಜೆಡಿಎಸ್ನಿಂದ ಮೈಸೂರು ಚಲೋಗೆ ರಣಕಹಳೆ ಮೊಳಗಿಸಿ ಇಂದು ಆರನೇ ದಿನಕ್ಕೆ ಕಾಲಿಟ್ಟಿತು. ಮಂಡ್ಯದಿಂದ ಪಾದಯಾತ್ರೆ ಶುರುವಾಗಿದ್ದೇ ತಡ. ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಎಂಟ್ರಿ ಕೊಟ್ಟರು. ಆದರೆ ಮಂಡ್ಯ ಜಿಲ್ಲೆಯಲ್ಲಿ 2ನೇ ದಿನದ ಪಾದಯಾತ್ರೆಯಿಂದಲೂ ಸುಮಲತಾ ಅವರು ದೂರ ಉಳಿದಿದ್ದಾರೆ. ನಿನ್ನೆ ಕೂಡ ಪಾದಯಾತ್ರೆ ನಡೆದರೂ ಅವರು ಪಾಲ್ಗೊಂಡಿಲ್ಲ. ಇಂದು ಕೂಡ ಮಂಡ್ಯದಲ್ಲೇ ಪಾದಯಾತ್ರೆ ನಡೆದಿದ್ದರೂ ಸುಮಲತಾ ಭಾಗಿಯಾಗಿಲ್ಲ.
ಮೈಸೂರು ಚಲೋ ಪಾದಯಾತ್ರೆಯಲ್ಲಿ ಇಂದು ಪ್ರೀತಂ ಗೌಡ ಭಾಗಿಯಾಗಿರಲ್ಲಿ. ನಿನ್ನೆ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಭಾಗವಹಿಸಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ಮತ್ತು ಪ್ರೀತಂಗೌಡ ಬೆಂಬಲಿಗರ ನಡುವೆ ಸಂಘರ್ಷ ನಡೆದಿತ್ತು. ಪ್ರೀತಂ ಗೌಡ ಪಾಲ್ಗೊಳ್ಳುವಿಕೆಗೆ ಜೆಡಿಎಸ್ ಬಲವಾದ ಆಕ್ಷೇಪ ಸಲ್ಲಿಸಿತ್ತು.
ಹಾದಿಯುದ್ದಕ್ಕೂ ಪ್ರಿತಂ ಪರ ಘೋಷಣೆ ಮೊಳಗಿದ್ದೇ ತಡ, ಜೆಡಿಎಸ್ ಕಾರ್ಯಕರ್ತರು ಅವರನ್ನ ತಡೆಯೋಕೆ ಮುಂದಾಗಿದ್ದರು. ಆಗ ವಾಗ್ವಾದವೇ ನಡೆದಿದ್ದಲ್ಲದೇ ತಳ್ಳಾಟ, ನೂಕಾಟವೂ ಆಗಿತ್ತು. ದೋಸ್ತಿ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಒಂದಷ್ಟು ಕಿಡಿಗೇಡಿಗಳು ಬಿಜೆಪಿ ಜೆಡಿಎಸ್ ಸಂಬಂಧ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.