ರಾಯಚೂರು:- ಸಿಂಧನೂರು ಡಿವೈಎಸ್ಪಿ ಕಚೇರಿಗೆ ಶ್ಯೂರಿಟಿ ನೀಡಲು ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದರು.
ಸಿರವಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕಲಬುರ್ಗಿ ಹೈಕೋರ್ಟ್ ಜಾತಿನಿಂದನೆ ಆರೋಪದ ಎಫ್ಐಆರ್ ರದ್ದುಗೊಳಿಸಿತ್ತು. ಸದ್ಯ ಚಕ್ರವರ್ತಿ ಸೂಲಿಬೆಲೆ ಅಪಮಾನಕರ ಭಾಷಣ, ದ್ವೇಷ ಭಾಷಣ ಪ್ರಕರಣ ಎದುರಿಸುತ್ತಿದ್ದಾರೆ.
ಡಿವೈಎಸ್ಪಿ ಕಚೇರಿ ಭೇಟಿ ಬಳಿಕ ಸಿಂಧನೂರಿನಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಖರ್ಗೆ ಕುಟುಂಬದ ಬಗ್ಗೆ ಹರಿಹಾಯ್ದರು. ಸಿರವಾರದಲ್ಲಿ ಮೋದಿಯವರ ಬಗ್ಗೆ ಮಾತನಾಡುತ್ತಾ ಖರ್ಗೆ ಕುಟುಂಬದ ಭ್ರಷ್ಟಾಚಾರ ಬಯಲಿಗೆಳೆಯುವ ಪ್ರಯತ್ನ ಮಾಡಿದ್ದೆ, ಮಾತನಾಡುವಾಗ ಈ ತರದ ಅಯೋಗ್ಯರು ಸಮಾಜ ಸೇವೆಗೆ ಉಪಯೋಗಿ ಅಲ್ಲ ಎನ್ನುವ ರೀತಿ ಮಾತು ಆಡಿದ್ದೆ. ಅದನ್ನ ಕಾಂಗ್ರೆಸ್ನವರು ತಿರುಚಿದ್ದಾರೆ. ದಲಿತರನ್ನು ಅಯೋಗ್ಯರು ಅಂತ ಕರೆದಿದ್ದಾರೆ ಜಾತಿ ನಿಂದನೆ ಮಾಡಿದ್ದಾರೆ ಅಂತ ತಿರುಚಿದರು.
ಅಧಿಕಾರ ತಮ್ಮಬಳಿ ಇದೆ ಎಂಬ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ತಮ್ಮ ಅಧಿಕಾರ ಬಳಸಿ ನನ್ನ ಹಣಿಯುವಂತ ಕೆಲಸಕ್ಕೆ ಮುಂದಾದರು ಎಂದು ಕಿಡಿಕಾರಿದರು